ನನ್ನ ಹೆಂಡತಿಯಾಗುವುದು ಸುಲಭವಲ್ಲ, ರಾಧಿಕಾ ಪಂಡಿತ್ ಹಣದ ವಿಚಾರಕ್ಕೆ ಯಶ್ ಗೆ ಏನು ಹೇಳ್ತಾರೆ ರಿವೀಲ್

Krishnaveni K

ಬುಧವಾರ, 23 ಅಕ್ಟೋಬರ್ 2024 (12:37 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಲಿವುಡ್ ಇಂಡಿಯಾ ರಿಪೋರ್ಟರ್ ಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನ, ಸಿನಿಮಾ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ವಿಶೇಷವಾಗಿ ಪತ್ನಿ ರಾಧಿಕಾ ಬಗ್ಗೆ ಮಾತನಾಡಿದ್ದಾರೆ.

ನನ್ನಂತಹವನ ಹೆಂಡತಿಯಾಗುವುದು ಅಷ್ಟು ಸುಲಭವಲ್ಲ. ಹಿಂದೆ ಮುಂದೆ ನೋಡದೇ ನನ್ನ ಗುರಿ ತಲುಪಲು ಯಾವುದೇ ಹುಚ್ಚು ಸಾಹಸಕ್ಕೆ ಕೈ ಹಾಕಲು ಹೊರಡುವ ನನ್ನ ಹೆಂಡತಿಯಾಗುವುದು ಸುಲಭವಲ್ಲ. ರಾಧಿಕಾ ಯಾವತ್ತೂ ನನಗೆ ನನ್ನ ಗುರಿ ಸಾಧನೆಗೆ ಅಡ್ಡಿ ಬಂದಿಲ್ಲ ಎಂದು ಯಶ್ ಸಂದರ್ಶನದಲ್ಲಿ ಹೇಳಿದ್ದಾರೆ.

ರಾಧಿಕಾ ಯಾವತ್ತೂ ನನಗೆ ಯಾಕೆ ಈ ಸಿನಿಮಾ ಒಪ್ಪಿಕೊಂಡಿದ್ದೀಯಾ? ನಿನಗೆ ಎಷ್ಟು ಸಂಭಾವನೆ ಕೊಡ್ತಾರೆ ಎಂದು ಕೇಳಿಯೇ ಇಲ್ಲ. ಹಣದ ವಿಚಾರಕ್ಕೆ ಯಾವತ್ತೂ ಅವಳು ನನ್ನ ಪ್ರಶ್ನೆ ಮಾಡಿಲ್ಲ. ಸಿನಿಮಾ ಒಪ್ಪಿಕೊಂಡಾಗ ನೀನು ಹ್ಯಾಪಿಯಾಗಿದ್ದೀಯಾ ಎಂದಷ್ಟೇ ಕೇಳುತ್ತಾಳೆ ಎಂದಿದ್ದಾರೆ ಯಶ್.

ನನ್ನ ಕುಟುಂಬದ ಸಪೋರ್ಟ್ ನನಗೆ ಚೆನ್ನಾಗಿದೆ. ನಾನು ಏನೇ ಮಾಡುವುದಿದ್ದರೂ ಒಂದೂ ಪ್ರಶ್ನೆ ಮಾಡದೇ ನನ್ನ ಹಿಂದೆ ಇರುತ್ತಾರೆ. ಅವರಿಂದಲೇ ನಾನು ಯಾವುದೇ ಸಾಹಸ ಮಾಡಲು, ಖುಷಿಯಾಗಲು ಸಾಧ್ಯವಾಗಿರುವುದು ಎಂದಿದ್ದಾರೆ. ರಾಧಿಕಾ ಯಾವತ್ತೂ ನನ್ನಲ್ಲಿ ಕೇಳುವುದು ಅದೊಂದೇ. ಅದೇನೆಂದರೆ ನನ್ನ ಜೊತೆಗೆ ಅಮೂಲ್ಯ ಸಮಯ. ಆದರೆ ನನ್ನ ಬ್ಯುಸಿ ಶೆಡ್ಯೂಲ್ ನಲ್ಲಿ ನನಗೆ ಅವಳ ಜೊತೆ ಮತ್ತು ಮಕ್ಕಳ ಜೊತೆ ಸಮಯ ಸಿಗುವುದೇ ಅಪರೂಪ. ಆದರೂ ನನ್ನ ಶಕ್ತಿಮೀರಿ ಅವಳಿಗೆ ಸಮಯ ಕೊಡಲು ಪ್ರಯತ್ನಿಸುತ್ತೇನೆ ಎಂದು ಯಶ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ