Toxic Movie: ಕ್ಲಬ್ ಒಳಗೆ ಸ್ಟೈಲ್ ಆಗಿ ಎಂಟ್ರಿಕೊಟ್ಟ ಯಶ್: ಟಾಕ್ಸಿಕ್ ಗ್ಲಿಂಪ್ಸ್ ವಿಡಿಯೋ

Krishnaveni K

ಬುಧವಾರ, 8 ಜನವರಿ 2025 (11:10 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ನಿಮಿತ್ತ ಇಂದು ಟಾಕ್ಸಿಕ್ ಸಿನಿಮಾದ ಗ್ಲಿಂಪ್ಸ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ತುಣುಕಿನಲ್ಲಿ ಯಶ್ ಸ್ಟೈಲಿಶ್ ಆಗಿ ಕ್ಲಬ್ ಒಳಗೆ ಎಂಟ್ರಿ ಕೊಡುತ್ತಾರೆ.

ಕೆಜಿಎಫ್ 2 ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಟಾಕ್ಸಿಕ್. ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಲಯಾಳಂನ ಗೀತು ಮೋಹನ್ ದಾಸ್ ಚಿತ್ರದ ನಿರ್ದೇಶಕಿ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ.

ಟಾಕ್ಸಿಕ್ ಸಿನಿಮಾದ ತುಣುಕೊಂದನ್ನು ಚಿತ್ರತಂಡ ಇದೀಗ ಬಿಡುಗಡೆ ಮಾಡಿದೆ. ಈ ವಿಡಿಯೋ ಟೀಸರ್ ನೋಡಿದರೇ ಚಿತ್ರ ಎಷ್ಟು ಅದ್ಧೂರಿಯಾಗಿ ಮೂಡಿಬರುತ್ತಿದೆ ಎನ್ನುವುದು ಗೊತ್ತಾಗುತ್ತಿದೆ. ಮತ್ತೆ ಯಶ್ ಮಬ್ಬು ಬೆಳಕಿನಲ್ಲಿ ನಡೆಯಲಿರುವ ಥ್ರಿಲ್ಲರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಮಾದಕವಾಗಿ ಯುವತಿಯೊಂದಿಗೆ ಹೆಜ್ಜೆ ಹಾಕುವ ಸನ್ನಿವೇಶವೂ ಇದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಈ  ವಿಡಿಯೋಗೆ ಸಾಕಷ್ಟು ಲೈಕ್ಸ್, ವ್ಯೂ ಬರುತ್ತಿದೆ. ಯಶ್ ಜನ್ಮದಿನದಂದು ಇಂತಹದ್ದೊಂದು ಟೀಸರ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಅದೀಗ ನಿಜವಾಗಿದೆ.

PAN Indian Monster @TheNameIsYash is Ready for His Next BO Hunt ????#ToxicTheMovie

pic.twitter.com/HHouXRpu4i

— Let's X OTT GLOBAL (@LetsXOtt) January 8, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ