ಅಣ್ತಮ್ಮಾಸ್… ಯಶ್19 ಲೋಡಿಂಗ್: ಕೊನೆಗೂ ಅಪ್ ಡೇಟ್ ಕೊಟ್ಟ ಯಶ್

ಭಾನುವಾರ, 3 ಡಿಸೆಂಬರ್ 2023 (18:58 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವಾಗ ಘೋಷಣೆ ಮಾಡುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ಕೊನೆಗೂ ಖುಷಿ ಸುದ್ದಿ ಸಿಗುತ್ತಿದೆ.

ರಾಕಿ ಭಾಯಿ ಯಶ್ ತಮ್ಮ ಅಭಿಮಾನಿಗಳು ಖುಷಿಯಾಗುವಂತಹ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಯಶ್ ತಮ್ಮ ಇನ್ ಸ್ಟಾಗ್ರಾಂ ಪುಟದ ಪ್ರೊಫೈಲ್ ನಲ್ಲಿ ‘ಲೋಡಿಂಗ್’ ಎನ್ನುವ ಬರಹವಿರುವ ಫೋಟೋ ಪ್ರಕಟಿಸಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ.

ಈ ಮೂಲಕ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಸದ್ಯದಲ್ಲೇ ಅಪ್ ಡೇಟ್ ಕೊಡುವ ಸುಳಿವು ನೀಡಿದ್ದಾರೆ. ಡಿಸೆಂಬರ್ ಯಶ್ ಪಾಲಿಗೆ ಲಕ್ಕಿ ತಿಂಗಳು. ಹೀಗಾಗಿ ಇದೇ ತಿಂಗಳಲ್ಲಿ ಯಶ್ 19 ಘೋಷಣೆಯಾಗಲಿದೆ.

ಕೆಜಿಎಫ್ 2 ಬಿಡುಗಡೆಯಾಗಿ ವರ್ಷವೇ ಕಳೆದರೂ ಯಶ್ ಹೊಸ ಸಿನಿಮಾ ಘೋಷಣೆ ಮಾಡಿಲ್ಲ ಎಂದು ಅವರ ಮೇಲೆ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೆ ಯಶ್ ಈಗ ತಮ್ಮ ಇನ್ ಸ್ಟಾ ಫೋಟೋ ಚೇಂಜ್ ಮಾಡಿರುವುದು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ