ರಾಕಿಭಾಯಿ ಫ್ಯಾನ್ಸ್ ಗೆ ಮತ್ತೆ ಬೇಸರ: ದೀಪಾವಳಿಗೂ ಕೊಡಲಿಲ್ಲ ಯಶ್ ಹೊಸ ಸುದ್ದಿ

ಗುರುವಾರ, 16 ನವೆಂಬರ್ 2023 (11:21 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲೆ ಭಾರೀ ಬೇಸರಗೊಂಡಿದ್ದಾರೆ. ಇದಕ್ಕೆ ಕಾರಣ ಅವರು ದೀಪಾವಳಿಗೂ ನಿರಾಸೆ ಮಾಡಿದ್ದು.
 

ಯಶ್19 ಘೋಷಣೆಗಾಗಿ ಫ್ಯಾನ್ಸ್ ಬಹಳ ಸಮಯದಿಂದ ಕಾಯುತ್ತಲೇ ಇದ್ದಾರೆ. ಆದರೆ ಯಶ್ ಇದುವರೆಗೆ ಆ ಸುದ್ದಿ ಕೊಡಲೇ ಇಲ್ಲ. ದೀಪಾವಳಿ ಹಬ್ಬಕ್ಕೆ ಅವರ ಹೊಸ ಸಿನಿಮಾ ಘೋಷಣೆಯಾಗಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ದೀಪಾವಳಿಗೂ ಯಶ್ ಕಡೆಯಿಂದ ಸುದ್ದಿ ಬಂದಿಲ್ಲ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.

ಯಶ್ ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷವಾಗಿದೆ. ಪ್ರತೀ ಬಾರಿ ವಿಶೇಷ ದಿನಕ್ಕೆ ಯಶ್ ಹೊಸ ಸುದ್ದಿ ಕೊಡಬಹುದು ಎಂದು ಫ್ಯಾನ್ಸ್ ಕಾಯುತ್ತಲೇ ಇದ್ದಾರೆ. ಆದರೆ ಪ್ರತೀ ಬಾರಿಯೂ ನಿರಾಸೆಯಾಗುತ್ತಲೇ ಇದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ