ಬಿಜಿಎಸ್ ಉತ್ಸವದಲ್ಲಿ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ ಯಶ್
ಯಶ್ ಮುಂದಿನ ಸಿನಿಮಾ ಅಪ್ ಡೇಟ್ ಕೇಳಲು ಕಾದು ಕಾದು ಸಿನಿಮಾ ಪ್ರೇಮಿಗಳಿಗೇ ಸುಸ್ತಾಗಿದೆ. ಬರೋಬ್ಬರಿ ಒಂದೂವರೆ ವರ್ಷವಾದರೂ ತಮ್ಮ ಮುಂದಿನ ಸಿನಿಮಾ ಯಾವ ಬ್ಯಾನರ್ ಜೊತೆಗೆ ಎಂದೂ ಗುಟ್ಟುಬಿಟ್ಟುಕೊಟ್ಟಿಲ್ಲ.
ಇಂದು ಬಿಜಿಎಸ್ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಯಶ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ನನಗೆ ನಿಮ್ಮ ಕಾಯುವಿಕೆ ಅರ್ಥವಾಗುತ್ತದೆ. ಆದರೆ ನಾನು ಸುಮ್ಮನೇ ಕೂತಿಲ್ಲ. ಬದಲಿಗೆ ದೊಡ್ಡ ಮಟ್ಟದ ಕೆಲಸಕ್ಕೆ ಸಜ್ಜಾಗುತ್ತಿದ್ದೇನೆ. ಎಲ್ಲರೂ ಹೆಮ್ಮೆಪಡುವಂತಹಾ ಕೆಲಸವನ್ನೇ ಮಾಡುತ್ತೇನೆ.
ನಾನು ಯಾವತ್ತು ನನ್ನ ಸಿನಿಮಾ ಅನೌನ್ಸ್ ಮಾಡುತ್ತೇನೆಂದು ಹೇಳಿಲ್ಲ. ಹಾಗಿದ್ದರೂ ಪ್ರತಿ ಹಬ್ಬ ಬಂದಾಗ, ಹುಟ್ಟುಹಬ್ಬ ಬಂದಾಗ ಯಶ್ ಸಿನಿಮಾ ಘೋಷಣೆ ಮಾಡ್ತಾರೆ ಎಂದು ಸುದ್ದಿ ಹಾಕ್ತಾರೆ. ಇದರಿಂದ ಗೊಂದಲ ಸೃಷ್ಟಿಯಾಗುತ್ತಿದೆ. ಎಲ್ಲ ಊಟ ರೆಡಿ ಆದ ಮೇಲೇ ಬಡಿಸಿದರೇ ಚೆನ್ನ. ಅರ್ದಂಬರ್ಧ ಅಡುಗೆ ಮಾಡಿ ಊಟಕ್ಕೆ ಕರೆದರೆ ಸರಿ ಹೋಗಲ್ಲ. ನೀವೆಲ್ಲರೂ ಹೆಮ್ಮೆಪಡುವಂತಹಾ ಕೆಲಸ ಮಾಡುತ್ತೇನೆ ಎಂದಿದ್ದಾರೆ.