ಪಾಂಡಿಚೆರಿಯಲ್ಲಿ ಭಟ್ಟರ ’ಮುಗುಳುನಗೆ’

ಶನಿವಾರ, 21 ಜನವರಿ 2017 (14:35 IST)
ಯೋಗರಾಜ್ ಭಟ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳುನಗೆ ಚಿತ್ರದ ಶೂಟಿಂಗ್ ಸದ್ಯಕ್ಕೆ ಪಾಂಡಿಚೆರಿಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಫೆಬ್ರವರಿ ಕೊನೆಯ ತನಕ ಪಾಂಡಿಚೆರಿಯಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
 
ಇದಕ್ಕೂ ಮುನ್ನ ಎರಡನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆದಿತ್ತು. ಮುಗುಳುನಗೆ ಚಿತ್ರದಲ್ಲಿ ಒಟ್ಟು ನಾಲ್ಕು ಮಂದಿ ನಾಯಕಿಯರಿದ್ದಾರೆ. ಅಮೂಲ್ಯಾ, ಜಾಕಿ ಭಾವನಾ, ನಿಖಿತಾ ನಾರಾಯಣ್ ಮತ್ತು ಆಶಿತಾ. ಸಯೀದ್ ಸಲ್ಮಾನ್ ನಿರ್ಮಿಸುತ್ತಿರುವ ಚಿತ್ರ ಇದು.
 
ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನೂ ಯೋಗರಾಜ್ ಭಟ್ ಹೊತ್ತಿದ್ದಾರೆ. ಸುಜ್ಞಾನ್ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದ್ದು ಸ್ಯಾಂಡಲ್‍ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಸಿನಿಮಾ ಇದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ