ಯುವರತ್ನ ಬಹುನಿರೀಕ್ಷಿತ ಸಾಂಗ್ ಬಿಡುಗಡೆ ಮುಂದೂಡಿಕೆ: ಕಾರಣ ತಿಳಿಸಿದ ಪುನೀತ್

ಭಾನುವಾರ, 21 ಫೆಬ್ರವರಿ 2021 (08:57 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಬಹುನಿರೀಕ್ಷಿತ ಹಾಡು ‘ಪಾಠಶಾಲಾ’ ಇಂದು ಬಿಡುಗಡೆಯಾಗಬೇಕಿತ್ತು.


ಈಗಾಗಲೇ ಈ ಹಾಡು ರಾಜಕುಮಾರದ ಬೊಂಬೆ ಹೇಳುತೈತೆ ಹಾಡಿನ ರೇಂಜಲ್ಲಿರುತ್ತದೆ ಎಂದು ಚಿತ್ರತಂಡ ಹೈಪ್ ಕ್ರಿಯೇಟ್ ಮಾಡಿದೆ. ಹೀಗಾಗಿ ಈ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಹಾಡಿನ ಬಿಡುಗಡೆ ಮುಂದೂಡಲಾಗಿದೆ. ಮುಂದೆ ಯಾವಾಗ ಬಿಡುಗಡೆ ಮಾಡುತ್ತೇವೆಂದು ಸದ್ಯದಲ್ಲೇ ಪ್ರಕಟಿಸುತ್ತೇವೆಂದು ನಟ ಪುನೀತ್ ರಾಜಕುಮಾರ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ