ಯುವರತ್ನ ಸ್ಪೆಷಲ್ ಸಾಂಗ್ ಫೆಬ್ರವರಿ 21 ಕ್ಕೆ ರಿಲೀಸ್

ಗುರುವಾರ, 18 ಫೆಬ್ರವರಿ 2021 (09:09 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ವಿಶೇಷ ಹಾಡೊಂದು ಫೆಬ್ರವರಿ 21 ಕ್ಕೆ ಲಾಂಚ್ ಆಗುತ್ತಿದೆ.


ಈ ಹಾಡು ಬಿಡುಗಡೆಯಾಗುತ್ತಿದೆ ಎಂದಾಗಲೇ ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿದೆ. ಇದಕ್ಕೆ ಕಾರಣ ಈ ಹಾಡು ರಾಜಕುಮಾರ ಸಿನಿಮಾದ ಎವರ್ ಗ್ರೀನ್ ಹಾಡು ಬೊಂಬೆ ಹೇಳುತೈತೆ ಹಾಡಿನ ರೇಂಜ್ ನಲ್ಲಿರುತ್ತೆ ಎಂದು ಚಿತ್ರತಂಡ ಹೇಳಿಕೊಂಡಿರುವುದು. ‘ಪಾಠಶಾಲಾ’ ಎಂಬ ಯುವರತ್ನ ಸಿನಿಮಾದ ಮೂರನೇ ಹಾಡು ಭಾನುವಾರ 4.20 ಕ್ಕೆ ಲಾಂಚ್ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ