ಓಟಿಟಿಗೆ ಲಗ್ಗೆಯಿಟ್ಟ “ಸಪ್ತ ಸಾಗರದಾಚೆಯೆಲ್ಲೋ
ಬೆಂಗಳೂರು : ಎರಡು ಭಾಗಗಗಳಲ್ಲಿ ಬಂದ ಸಪ್ತ ಸಾಗರದಾಚೆಯೆಲ್ಲೋ ಸಿನಿಮಾ ಮೊದಲ ಭಾಗ ಸೈಡ್ ಎ ಶೀರ್ಷಿಕೆಯಡಿ ತೆರೆಕಂಡಿತ್ತು. ನವಿರು ಪ್ರೇಮಕಾವ್ಯದ ಕಥಾನಕ ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ವಿಶಿಷ್ಟ ಶೈಲಿಯಿಂದಾಗ ಗಮನ ಸೆಳೆದಿತ್ತು.
ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ “ಸಪ್ತ ಸಾಗರದಾಚೆಯೆಲ್ಲೋ ಸೈಡ್ ಬಿ” ಗುರುವಾರದಿಂದ ಓಟಿಟಿಗೆ ಲಗ್ಗೆಯಿಟ್ಟಿದೆ. ಅಮೆಜಾನ್ ಪ್ರೈಮ್ ಮೂಲಕ ಚಿತ್ರ ಈ ಬಹುನಿರೀಕ್ಷಿತ ಸಿನಿಮಾ ಚಿತ್ರರಸಿಕರ ಮನ ತಣಿಸಲಿದೆ. ಕಳೆದ ತಿಂಗಳೇ ಸೈಡ್ ಬಿ ಓಟಿಟಿಗೆ ಬರುವುದಾಗಿ ಊಹಾಪೋಹಗಳೆದ್ದಿತ್ತು. ಆದರೆ ಚಿತ್ರತಂಡ ಇತ್ತೀಚಿಗಷ್ಟೇ ಜ. 25 ರಂದು ಬಿಡುಗಡೆ ಮಾಡುವುದಾಗಿ ಹೇಳಿತ್ತು.