ಜಾನ್ ಜಾನಿ ಜನಾರ್ಧನ್ ಚಿತ್ರ ಬಿಡುಗಡೆ ಡೇಟ್ ಫಿಕ್ಸ್

ಶುಕ್ರವಾರ, 18 ನವೆಂಬರ್ 2016 (13:28 IST)
ಬೆಂಗಳೂರು: ನೋಟು ಬದಲಾವಣೆ ವಿಚಾರ ಬಾರದೇ ಇದ್ದಿದ್ದರೆ ಜಾನ್ ಜಾನಿ ಜನಾರ್ಧನ್ ಚಿತ್ರ ಕಳೆದ ವಾರವೇ ಬಿಡುಗಡೆಯಾಗಬೇಕಿತ್ತು. ಆದರೆ ಜನರು ಹಣವಿಲ್ಲದೇ ಒದ್ದಾಡುತ್ತಿರುವಾಗ ಚಿತ್ರ ನೋಡಲು ಯಾರೂ ಬರುವುದಿಲ್ಲ ಎನ್ನುವ ಕಾರಣಕ್ಕೆ ಬಿಡುಗಡೆಯಾಗಲಿಲ್ಲ.

ಇದೀಗ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಜಾನ್ ಜಾನಿ.. ಡಿಸೆಂಬರ್ 9ಕ್ಕೆ ತೆರೆ ಕಾಣಲಿದೆ. ಅದೇ ದಿನ ಗಣೇಶ್ ಅಭಿನಯದ ಸುಂದರಾಂಗ ಜಾಣ ಕೂಡಾ ಬಿಡುಗಡೆಯಾಗುತ್ತಿದೆ. ಮುತ್ತಪ್ಪ ರೈ ಲಾಂಛನದಲ್ಲಿ ತಯಾರಾಗಿರುವ ಜಾನಿ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಡಾರ್ಲಿಂಗ್ ಕೃಷ್ಣ ಮತ್ತು ಅಜೇಯ್ ರಾವ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಲೇಡಿ ಟೈಗರ್ ಮಾಲಾಶ್ರೀ ಕೂಡಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗುರುದೇಶಪಾಂಡೆ ಇದರ ನಿರ್ದೇಶಕರು. ಮೂವರು ಸ್ನೇಹಿತರ ಕುರಿತಾದ ಕತೆಯಿದೆ. ಅಜೇಯ್ ರಾವ್ ಗೆ ಹೊಸ ಇಮೇಜ್ ತಂದುಕೊಡಬಹುದಾದ ಚಿತ್ರವಿದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ