ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ ಸತ್ಯ

ಶನಿವಾರ, 3 ಏಪ್ರಿಲ್ 2010 (13:22 IST)
ಚಿತ್ರ ಸಮೀಕ್ಷೆ
ಚಿತ್ರ: ಸತ್ಯ
ನಿರ್ದೇಶನ: ಕುಮಾರ್ ಗೋವಿಂದ್
ತಾರಾಗಣ: ಕುಮಾರ್ ಗೋವಿಂದ್, ಡಿಂಪಲ

ಕುಮಾರ್ ಗೋವಿಂದ್ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಾಯಕನ ಜವಾಬ್ದಾರಿಯನ್ನು ಸತ್ಯ ಚಿತ್ರದ ಮೂಲಕ ಹೊತ್ತುಕೊಂಡಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಕುಮಾರ್ ಅಭಿಮಾನಿಗಳಿಗೆ ನಿರಾಸೆ ಕಾದಿದೆ.

ಚಿತ್ರದ ಮೊದಲಾರ್ಧ ಕತೆಯ ಒಳಾರ್ಥ ತಿಳಿಯದೆ ಪ್ರೇಕ್ಷಕ ಒದ್ದಾಡುವುದರಲ್ಲಿ ಎರಡು ಸಂಶಯವಿಲ್ಲ. ನಾಯಕ ಮುಂಬಯಿಯಿಂದ ರಾಜಸ್ತಾನ ಅಲ್ಲಿಂದ ಕೇರಳದವರೆಗೆ ಹಲವು ಡಾಕ್ಟರ್‌ಗಳನ್ನು ಕೊಲೆ ಮಾಡುತ್ತಾ ಬರುತ್ತಾನೆ. ಕೊನೆಗೆ ಆತ ಮುಂದಿನ ಕೊಲೆ ಬೆಂಗಳೂರಿನಲ್ಲಿಯೇ ಮಾಡುತ್ತಾನೆ ಎಂದು ಪೊಲೀಸರಿಗೆ ತಿಳಿಯುತ್ತದೆ. ಆದರೆ ರಾಜಸ್ತಾನದಿಂದ ಕೇರಳದವರೆಗೆ ಪಯಣಿಸುವಾಗ ಎಲ್ಲಾ ಕಡೆಗಳಲ್ಲೂ ಕನ್ನಡದ ಬಸ್‌ಗಳು, ಬೋರ್ಡ್‌ಗ ಳು ಕಾಣಿಸುವುದು ಮಾತ್ರ ಸೋಜಿಗ.

ಚಿತ್ರದ ಕತೆ ಅರ್ಥವಾಗುವುದು ಮಧ್ಯಂತರದ ಬಳಿಕ ಯಾಕೆ ನಾಯಕ ಡಾಕ್ಟರ್‌ಗಳನ್ನು ಕೊಲೆ ಮಾಡುತ್ತಾನೆ ಎಂಬ ಬಗ್ಗೆ ಕತೆ ಸಾಗುತ್ತದೆ. ಹಳ್ಳಿಯಲ್ಲಿರುವ ನಾಯಕನಿಗೆ ವೈದ್ಯಕೀಯ ಸೀಟು ನೀಡುವಲ್ಲಿ ಒರ್ವ ಹುಡುಗಿ ಕಾರಣಕರ್ತಳಾಗುತ್ತಾಳೆ. ಹೀಗೆ ಇವರಿಬ್ಬರಿಗೆ ಪ್ರೇಮಾಂಕುರವಾಗುತ್ತದೆ. ಆದರೆ ಆಕೆಯನ್ನು ಕಾಲೇಜಿನ ಸಹಪಾಠಿಗಳೇ ಅತ್ಯಚಾರ ಮಾಡಿ ಕೊಲೆ ಮಾಡುತ್ತಾರೆ. ಇದರಿಂದ ಸತ್ಯ ಕೊಲೆಗಾರನಾಗುತ್ತಾನೆ. ಚಿತ್ರದ ಎರಡನೇ ಭಾಗದಲ್ಲಿ ಸ್ವಲ್ಪ ಆಸಕ್ತಿ ಮೂಡಿದರೂ, ಒಟ್ಟಾರೆ ಚಿತ್ರ ಪ್ರೇಕ್ಷಕರಿಗೆ ನಿರಾಸಕ್ತಿ ನೀಡುತ್ತದೆ.

ಮುಖ್ಯವಾಗಿ ಕುಮಾರ್ ಗೋವಿಂದ್ರ ನಟನೆ ಇನ್ನೂ ಚೆನ್ನಾಗಿ ಮೂಡಿ ಬರಬೇಕಿತ್ತು. ಕ್ಯಾಮೆರಾ ಕೆಲಸ ಓಕೆ. ನಾಗೇಂದ್ರ ಪ್ರಸಾದ್ ಅವರ ಸಂಗೀತ ಕಿವಿಯಲ್ಲಿ ಮತ್ತೆ ಮತ್ತೆ ಗುಣುಗುತ್ತದೆ.

ವೆಬ್ದುನಿಯಾವನ್ನು ಓದಿ