ಹೊಡಿಮಗ: ಅದೇ ರಾಗ, ಅದೇ ಹಾಡು

ರವಿಪ್ರಕಾಶ್ ರ

MOKSHENDRA
ಚಿತ್ರ: ಹೊಡಿಮಗ

ನಿರ್ದೇಶನ: ಸತ್ಯ.ಪಿ

ತಾರಾಗಣ:

ಶಿವರಾಜ್‌ಕುಮಾರ್,

ನಿಕೋಲೆಟ್ ಬರ್ಡ್,

ಪವಿತ್ರಾ ಲೋಕೇಶ್,

ಶರತ್ ಲೋಹಿತಾಶ್ವ.


ತಾಯಿ ಮಗನ ಪ್ರೀತಿಗೆ ಭೂಗತ ಲೋಕ ಅಡ್ಡ ಬರುತ್ತದೆ. ತನ್ನ ತಾಯಿ ಪ್ರೀತಿಯನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಮಗ ಮಚ್ಚು ಹಿಡಿಯುತ್ತಾನೆ. ನೂರಾರು ತಲೆಗಳು ಉರುಳಿ ಬಕೆಟುಗಟ್ಟಲೆ ರಕ್ತ ಸುರಿಯುತ್ತದೆ. ಈ ಕಥೆಯನ್ನು ಎಲ್ಲೋ ಕೇಳಿದ್ದೇವೆ ಅಂತನಿಸಿದರೆ ಅದು ನಿಮ್ಮ ತಪ್ಪಲ್ಲ, ಅದು ಹೊಡಿಮಗ ಚಿತ್ರದ ನಿರ್ದೇಶಕರ ತಪ್ಪು.

MOKSHENDRA
ಈ ವಾರ ಬಿಡುಗಡೆಯಾದ ಹೊಡಿಮಗ ಚಿತ್ರವನ್ನು ನೋಡುತ್ತಿದ್ದಂತೆ ಯಾವುದೋ ಚಿತ್ರವನ್ನು ನೋಡಿದ ಅನುಭವಾಗುತ್ತದೆ. ಶಿವಣ್ಣ ನಟಿಸಿ ಭರ್ಜರಿ ಯಶಸ್ಸು ಕಂಡ ಜೋಗಿ ಚಿತ್ರ ಕೂಡಾ ಇದೇ ರೀತಿಯ ಕಥೆಯನ್ನು ಹೊಂದಿತ್ತು. ಆದರೆ ಜೋಗಿ ಚಿತ್ರವನ್ನು ನಿರ್ದೇಶಕ ಪ್ರೇಮ್ ನಿರೂಪಿಸಿದ ಪರಿ ಎಲ್ಲರಿಗೂ ಇಷ್ಟವಾಗಿತ್ತು. ಆದರೆ ಇಲ್ಲಿ ತಾಯಿ ಮಗನ ಸೆಂಟಿಮೆಂಟನ್ನು ಅಪಹಾಸ್ಯ ಮಾಡಲಾಗಿದೆ.

ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಹುಡುಗನೊಬ್ಬ ಅನಿವಾರ್ಯವಾಗಿ ಎರಡು ರೌಡಿ ತಂಡಗಳ ನಡುವೆ ಸಿಕ್ಕಿಕೊಂಡು ಕೊನೆಗೆ ತಾನೇ ಮಚ್ಚು ಹಿಡಿದು ಭೂಗತ ಲೋಕವನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆಯುತ್ತಾನೆ. ಈ ಕಥೆಯನ್ನು ನಿರೂಪಿಸಲು ನಿರ್ದೇಶಕರು ಚಿತ್ರದಲ್ಲಿ ನೂರಾರು ತಲೆಗಳನ್ನು ಉರುಳಿಸಿದ್ದಾರೆ. ಅನೇಕ ವಸ್ತುಗಳನ್ನು ಪುಡಿಗೈದಿದ್ದಾರೆ.

MOKSHENDRA
ಮಾಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಟು ಸತ್ಯ ಕ್ಯಾಚಿಯಾದ ಸಂಭಾಷಣೆಯನ್ನು ಹೆಣೆದಿದ್ದಾರೆ. ಆದರೆ ಕೆಲವೊಮ್ಮೆ ಈ ಸಂಭಾಷಣೆ ಯಾಕೋ ಅಸಹ್ಯವೆನಿಸುತ್ತದೆ.
ಇಲ್ಲಿ ದುರ್ಗಿಯಾಗಿ ನಟಿಸಿದ ಪವಿತ್ರಾ ಲೋಕೇಶ್‌ಗೆ ಇನ್ನಷ್ಟು ಖದರ್ ಇದ್ದರೆ ಚೆನ್ನಾಗಿರುತಿತ್ತು. ಶಿವಣ್ಣನ ತಾಯಿಯಾಗಿ ನಟಿಸಿದ ಮಂಜು ಭಾರ್ಗವಿ ಚೆನ್ನಾಗಿ ಅಭಿನಯಿಸಿದ್ದಾರೆ. ಆದರೆ ನಿರ್ದೇಶಕರು ಅವರ ಪಾತ್ರವನ್ನು ತೀರಾ ಕೆಳಮಟ್ಟಕ್ಕೆ ಇಳಿಸಿದ್ದಾರೆ. ಖಳನಾಗಿ ಕಾಣಿಸಿಕೊಂಡ ಶರತ್ ಲೋಹಿತಾಶ್ವ ಅವರ ನಟನೆಗೆ ತಲೆದೂಗಲೇ ಬೇಕು. ಅವರ ಧ್ವನಿ, ದೃಶ್ಯಕ್ಕೆ ತಕ್ಕಂತೆ ಹಾವಭಾವ ಎಲ್ಲವೂ ಚಿತ್ರದುದ್ದಕ್ಕೂ ಸೂಪರೋ ಸೂಪರ್.

ಶಿವಣ್ಣ ಈ ಹಿಂದೆ ಇಂತಹ ಅನೇಕ ಚಿತ್ರಗಳಲ್ಲಿ ನಟಿಸಿರುವುದರಿಂದ ಅವರ ನಟನೆ ಬಗ್ಗೆ ಮಾತನಾಡುವ ಹಾಗಿಲ್ಲ. ನಟಿ ಬರ್ಡ್ ವೈಯ್ಯಾರ ಚೆನ್ನಾಗಿದೆ. ಚಿತ್ರ ಕಿರಿಕಿರಿ ಎನಿಸುವಷ್ಟರಲ್ಲಿ ಮಧ್ಯೆ ಬರುವ ಜೆಸ್ಸಿ ಗಿಫ್ಟ್ ಅವರ ಸಂಗೀತ ಮಧುರವಾಗಿದೆ. ಅಂತೂ ಟೈಮಿದ್ದರೆ ಒಮ್ಮೆ ನೋಡಿ ಬರಬಹುದೇನೋ.