Harshika Poonaccha: ಮಗಳಿಗೆ ದೈವಿಕ ಹೆಸರಿಟ್ಟ ಹರ್ಷಿಕಾ ಪೂಣಚ್ಚ ದಂಪತಿ

Krishnaveni K

ಶನಿವಾರ, 3 ಮೇ 2025 (13:17 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸೆಲೆಬ್ರಿಟಿಗಳೂ ದೈವಿಕ ಹೆಸರಿನ ಮೊರೆ ಹೋಗತ್ತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ದಂಪತಿ ತಮ್ಮ ಮಗಳಿಗೆ ಸಾಂಪ್ರದಾಯಿಕ ಹೆಸರಿಟ್ಟು ಗಮನ ಸೆಳೆದಿದ್ದಾರೆ.
 

ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಜೋಡಿ ಇತ್ತೀಚೆಗೆ ಹೆಣ್ಣು ಮಗುವಿನ ಪೋಷಕರಾಗಿದ್ದರು. ಮನೆಗೆ ಮಗು ಬಂದ ಬೆನ್ನಲ್ಲೇ ಹರ್ಷಿಕಾ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಮೇತ ಖುಷಿ ಹಂಚಿಕೊಂಡಿದ್ದಾರೆ.

ಇದೀಗ ಹರ್ಷಿಕಾ ದಂಪತಿ ಮಗುವಿನ ಹೆಸರು ರಿವೀಲ್ ಮಾಡಿದ್ದಾರೆ. ಹರ್ಷಿಕಾ ತಮ್ಮ ಮಗುವಿಗೆ ತ್ರಿದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದಾರೆ. ತಮ್ಮ ಮನೆತನದ ಹೆಸರಿನ ಜೊತೆ ದೇವಿಯ ಹೆಸರು ಬರುವಂತೆ ಅರ್ಥಗರ್ಭಿತವಾದ ಹೆಸರಿಟ್ಟಿದ್ದಾರೆ.

ಸೆಲೆಬ್ರಿಟಿಯಾಗಿದ್ದರೂ ಫ್ಯಾಶನ್, ಟ್ರೆಂಡಿ ಹೆಸರುಗಳ ಹಿಂದೆ ಬೀಳದೇ ದೈವಿಕ ಹೆಸರನ್ನಿಟ್ಟಿರುವುದು ವಿಶೇಷವಾಗಿದೆ. ಮಗುವಿನ ಹೆಸರು ನೋಡಿ ಅನೇಕ ಫ್ಯಾನ್ಸ್ ಶುಭಾಶಯ ವ್ಯಕ್ತಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ