ಚಿತ್ರ ವಿಮರ್ಶೆ: ಮಾದನ ಮಾನಸಿಯ ತಾಳ್ಮೆಯಿಂದಲೇ ನೋಡಬೇಕು

ಶನಿವಾರ, 26 ನವೆಂಬರ್ 2016 (10:16 IST)
ಬೆಂಗಳೂರು: ಅವನು ಅವಳನ್ನು ಪ್ರೀತಿ ಮಾಡುವ ಗುಂಗಿನಲ್ಲಿರುತ್ತಾನೆ. ಅವಳು ಪ್ರೀತಿಸುವಂತೆ ನಂಬಿಸುತ್ತಾಳೆ. ಅಸಲಿಗೆ ಅವಳು ಪ್ರೀತಿ ಮಾಡುವುದು ತನ್ನನ್ನಲ್ಲ ಎಂದು ಆತನಿಗೆ ಗೊತ್ತಾಗುತ್ತದೆ. ಮುಂದೆ ಆಗುವ ಟ್ವಿಸ್ಟ್ ಗಳೇನು ಎಂಬುದೇ ಮಾದ ಮತ್ತು ಮಾನಸಿಯ ಕತೆ.

ಯಾವುದೇ ಸಿನಿಮಾವಾದರೂ, ಕತೆಗೆ ವೇಗವಿಲ್ಲದಿದ್ದರೆ, ಥಿಯೇಟರ್ ನಲ್ಲಿ ಕುಳಿತು ನೋಡುವವರಿಗೆ ಹಿಂಸೆ ಎನಿಸುತ್ತದೆ. ಇಲ್ಲೂ ಹಾಗೆ. ಮೊದಲು ನಿಧಾನಕೆ ಸಾಗುವ ಕತೆಯಿಂದಾಗಿ ಪ್ರೇಕ್ಷಕ ಇನ್ನೇನು ಸೀಟು ಬಿಟ್ಟು ಏಳುತ್ತಾನೆ ಎನ್ನುವಾಗ ನಿರ್ದೇಶಕರು ಕತೆಗೆ ಕೊಂಚ ಟ್ವಿಸ್ಟ್ ನೀಡಿದ್ದಾರೆ. ಈ ಭಯಂಕರ ಅಚ್ಚರಿಗಳನ್ನು ನೋಡುವುದಕ್ಕಾಗಿಯೇ ನೀವು ಕೊನೆಯವರೆಗೂ ಸಿನಿಮಾ ನೋಡಬೇಕು.

ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ಕೊರತೆಗಳಿಲ್ಲ. ಆದರೆ ಅವರ ಹಿಂದಿನ ಸಿನಿಮಾಗಳಂತೆ ಅವರಿಗೆ ಇಲ್ಲಿ ಅಷ್ಟೊಂದು ಕೈ ಕಾಲು ಮುರಿಯುವ ಸೀನ್ ಗಳಿಲ್ಲ. ನಾಯಕಿ ಶೃತಿ ಹರಿಹರನ್ ಇಲ್ಲಿ ಬೋಲ್ಡ್ ಆಗಿ ಸ್ಟೆಪ್ ಹಾಕಿದ್ದೇ ಪ್ಲಸ್ ಪಾಯಿಂಟ್. ಉಳಿದ ಪೋಷಕ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಕೆಲವು ಅನಗತ್ಯ ದೃಶ್ಯಗಳು, ಹಾಡುಗಳೇ ಕಿರಿ ಕಿರಿ ಉಂಟು ಮಾಡುವುದು.

ಕತೆಯಲ್ಲಿ ಹೊಸತನವೇನಿಲ್ಲ. ಹಳೇ ಕತೆಗೆ ಹೊಸ ಟ್ವಿಸ್ಟ್ ಹಾಕಿ ಪ್ರೇಕ್ಷಕರಿಗೆ ಉಣಬಡಿಸಲಾಗಿದೆ. ಮನೋಮೂರ್ತಿಯವರ ಸಂಗೀತ ಹಿಂದಿನಷ್ಟು ಮೋಡಿ ಮಾಡದಿದ್ದರೂ ಕೇಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ