ಕೆಸರಾದ ಕೆಂಚ

MOKSHA
ಚಿತ್ರ : ಕೆಂಚ
ನಿರ್ದೇಶನ : ಪಿ.ಎನ್. ಸತ್ಯಾ
ತಾರಾಗಣ : ಪ್ರಜ್ವಲ್ ದೇವರಾಜ್, ಪ್ರಜ್ಞಾ

ನಿರ್ದೇಶಕ ಪಿ. ಸತ್ಯಾ ಈ ಹಿಂದೆ ನಿರ್ದೇಶಿಸಿದ್ದ ಹಲವು ಚಿತ್ರಗಳು ಕೆಂಚದಲ್ಲಿ ಮತ್ತೊಮ್ಮೆ ಪುನರಾವರ್ತನೆಯಾದಂತೆ ಕಾಣುತ್ತಿದೆ. ಅದೇ ಕಾಲೇಜ್ ಲವ್ ಸ್ಟೋರಿ, ಹಳಸಲು ಸ್ಕ್ರೀನ್ ಪ್ಲೇ. ತಲೆನೋವು ಬರಿಸುವ ಹಾಡುಗಳು, ಕಿರಿಕಿರಿ ಡೈಲಾಗ್‌ಗಳು ಚಿತ್ರವನ್ನು ನೋಡದೇ ಇರುವಂತೆ ಮಾಡುತ್ತವೆ.

ರೌಡಿಯ ಮಗ ಸಭ್ಯ, ಅನಾಥ ಮಕ್ಕಳಿಗಾಗಿ ಡ್ಯಾನ್ಸ್ ಮಾಡಿ, ಬೈಕ್ ರೇಸ್‌ನಲ್ಲಿ ಭಾಗಿಯಾಗಿ ಹಣ ಸಂಪಾದಿಸುವಷ್ಟು ಒಳ್ಳೆಯವ ನಾಯಕ. ಅದೇ ಕಾಲೇಜಿನಲ್ಲಿ ಓದುವ ಹುಡುಗಿಯನ್ನು ಲವ್ ಮಾಡುವ ತುಂಟ. ಈ ನಡುವೆ ವಿಲನ್‌ಗಳ ಎಂಟ್ರಿ. ಸುಪಾರಿ ಕಿಲ್ಲರ್‌ಗಳ ಹಾವಳಿ. ಒಟ್ಟಾರೆ ನೋಡಿದರೆ ಚಿತ್ರದಲ್ಲಿ ಹೊಸತನವೇನೂ ಕಂಡು ಬರುವುದಿಲ್ಲ.

ಆದರೆ, ನಾಯಕನಾಗಿ ಪ್ರಜ್ವಲ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಲ್ಲಿ ಲಾಂಗ್ ಮಚ್ಚುಗಳ ರುದ್ರನರ್ತನ ಇಲ್ಲದಿದ್ದರೂ, ಪ್ರಜ್ವಲ್ ಹಿಂದಿನ ಎಲ್ಲ ಚಿತ್ರಗಳಿಗೆ ಹೋಲಿಸಿದರೆ ತುಂಬಾ ಚೆನ್ನಾಗಿ ಹೊಡೆದಾಡಿದ್ದಾರೆ. ಡ್ಯಾನ್ಸ್‌ಗೂ ಸೈ ನಟನೆಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ. ನಟಿ ಪ್ರಜ್ಞಾ ನಟನೆ ಒಮ್ಮೆ ನೋಡಬಹುದು. ಅಭಿನಯದಲ್ಲಿ ಇನ್ನೂ ಪಳಗಬೇಕು. ನಿರ್ಮಾಪಕ ರಮೇಶ್ ಯಾದವ್ ಇಂಥ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಏಕಿಷ್ಟು ಟೈಮ್ ತಗೊಂಡರೋ... ಅವರೇ ಹೇಳಬೇಕು.

ವೆಬ್ದುನಿಯಾವನ್ನು ಓದಿ