ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 5 ರಲ್ಲಿ ಸೆಲೆಬ್ರಿಟಿಗಳ ಜೊತೆಗೆ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಲಾಗಿತ್ತು. ಅದರಂತೆ 11 ಜನ ಸೆಲೆಬ್ರಿಟಿಗಳ ಜೊತೆ 6 ಜನ ಕಾಮನ್ ಮ್ಯಾನ ಮನೆಯೊಳಗೆ ಬಂದರು. ಅದರೆ ಕಾಮನ್ ಮ್ಯಾನ್ ಕಡೆಯಿಂದ ಬಂದಿರುವ ಸಮೀರ್ ಆಚಾರ್ಯ ಅವರು ಮಾಡಿರುವ ಸಾಧನೆ ಮಾತ್ರ ಅಸಾಮಾನ್ಯ. ಇತ್ತೀಚೆಗಷ್ಟೆ ಸಂಯುಕ್ತಾ ಅವರಿಂದ ಅಪವಾದಕ್ಕೆ ಗುರಿಯಾಗಿ ಹಲ್ಲೆಗೊಳಗಾದ ಸಮೀರ್ ಆಚಾರ್ಯ ಅವರ ಬಗ್ಗೆ ಎಲ್ಲರೂ ತಿಳಿಯಲೇ ಬೇಕಾದ ವಿಷಯಗಳಿವೆ.
ಹುಬ್ಬಳ್ಳಿ ಮೂಲದ ಸಮೀರ್ ಆಚಾರ್ಯರ ವಯಸ್ಸು 28. ಏಳನೇ ತರಗತಿ ಓದಿದ ಇವರು ಸಂಸ್ಕೃತ, ಶಾಸ್ತ್ರಗ್ರಂಥಗಳನ್ನು ಅಧ್ಯಾಯನ ಮಾಡಿದ್ದಾರೆ. ಸಂಸ್ಕಾರ ಎನ್ನುವ ಕಾರ್ಯಕ್ರಮದ ಮೂಲಕ ಪ್ರತಿ ಶಾಲೆಗೂ ಹೋಗಿ ಮಕ್ಕಳಲ್ಲಿ ತಮ್ಮ ದೇಶ ಹಾಗೂ ಪೋಷಕರ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಾರೆ. ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿ ಒಂದು ದೇವಸ್ಥಾನ ಹಾಗು ಸಂಸ್ಕಾರ ಟ್ರಸ್ಟ್ ಶಾಲೆಯನ್ನು ನಡೆಸುತ್ತಿದ್ದಾರೆ. ಪ್ರತಿದಿನ ಉಚಿತ ಸಂಗೀತ ಹಾಗು ಶ್ಲೋಕ, ಸಂಸ್ಕೃತ ಧ್ಯಾನಗಳನ್ನು ಆಚಾರ್ಯ ದಂಪತಿಗಳು ಹೇಳಿಕೊಡುತ್ತಾರೆ.
ಅವರು ಯುವಕರಿಗೆ ಸಂಸ್ಕೃತಿಯ ವಿಚಾರ ತಿಳಿಸುವ ಉದ್ದೇಶದಿಂದಲ್ಲೇ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರು ತಮ್ಮದೇ ಖರ್ಚಿನಲ್ಲಿ 500ಕ್ಕೂ ಹೆಚ್ಚು ಊರುಗಳಿಗೆ ಹೋಗಿ ಅಲ್ಲಿನ ಮಕ್ಕಳಿಗೆ ಹಾಗೂ ಯುವಕರಿಗೆ ಧರ್ಮ,ಸಂಸ್ಕಾರ ಹಾಗೂ ಶಾಸ್ತ್ರಗಳ ಬಗ್ಗೆ ಪ್ರವಚನಗಳನ್ನು ಮಾಡುತ್ತಾರೆ. ಮಕ್ಕಳಲ್ಲಿ ದೇಶಪ್ರೇಮ ಹುಟ್ಟಿಸಿ ಸೈನ್ಯಕ್ಕೆ ಸೇರಲು ಪ್ರೇರೆಪಿಸುತ್ತಾರಂತೆ. ಇವರ ಈ ಕಾರ್ಯಕ್ಕೆ ಅಣ್ಣಾ ಹಜಾರೆ ಅವರೆ ಮೆಚ್ಚಿಕೊಂಡು ಭೇಷ್ ಎಂದಿದ್ದಾರಂತೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಸಮೀರ್ ಆಚಾರ್ಯ ಅವರು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಇರುವುದನ್ನು ನೋಡಿ ಅವರ ಹೃದಯವಂತಿಕೆಯನ್ನು ಎಲ್ಲರೂ ಮೆಚ್ಚಲೇಬೇಕು.