ಇನ್ನೂ ಮುಂದೆ ಮಹಿಳೆಯರು ಬಸ್ ಗಳಲ್ಲಿ ಟಿಕೆಟ್ ಪಡಿಯೋಹಾಗಿಲ್ಲ. ನಮ್ಮ ಮೆಟ್ರೋನಲ್ಲಿ ಬಳಕೆ ಆಗುತ್ತಿರುವ ಟ್ಯಾಪ್ & ಟ್ರಾವೆಲ್ ಮಾದರಿಯನ್ನ ಬಿಎಂಟಿಸಿಗೆ ತರಲು ಚಿಂತನೆ ನಡೆದಿದ್ದು, ಬಸ್ ಹತ್ತುವಾಗ ಬಾಗಿಲಲ್ಲಿ ಅಳವಡಿಸೋ ಯಂತ್ರಕ್ಕೆ ಟ್ಯಾಪಿಂಗ್ ಇಳಿಯುವಾಗ ಮತ್ತೊಮ್ಮೆ ಕಾರ್ಡ್ನ ಟ್ಯಾಪ್ ಮಾಡಿ ಇಳಿಯಬೇಕು. ರಷ್ ಇದ್ದಾಗ ದಾಖಲೆ ಪರಿಶೀಲಿಸಿ ಟಿಕೆಟ್ ನೀಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಕಂಡಕ್ಟರ್ಗೆ ಆಗೋ ಸಮಸ್ಯೆ ತಪ್ಪಿಸುವುದಕ್ಕೆ ಬಿಎಂಟಿಸಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಟ್ಯಾಪ್ ಮಾಡಿದಾಗ ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿದ್ದಾರೆ ಎಂಬ ಮಾಹಿತಿ ಸೇವ್ ಆಗುತ್ತೆ.. ಎನ್ಸಿಎಂಸಿ ಕಾರ್ಡ್ ಬಿಎಂಟಿಸಿಯಲ್ಲಿ ಅಳವಡಿಸಿಕೊಳ್ಳಲು ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಗೆ ಅನುಮತಿ ಕೇಳಿದ್ದು ಅನುಮತಿ ಸಿಕ್ಕ ನಂತರ ಜಾರಿ ಮಾಡೊದಾಗಿ ಬಿಎಂಟಿಸಿ ತಿಳಿಸಿದೆ.