ಮಂತ್ರಶಕ್ತಿ ನೆಪದಲ್ಲಿ 20 ತಿಂಗಳಲ್ಲಿ 10 ಮರ್ಡರ್ ಮಾಡಿದ ಕಿರಾತಕ
ತನ್ನಲ್ಲಿ ಅದ್ಭುತ ಶಕ್ತಿ ಇದೆ ಅಂತ ಜನರನ್ನು ನಂಬಿಸಿ ಆ ಕಿರಾತಕ 20 ತಿಂಗಳಲ್ಲಿ 10 ಕೊಲೆಗಳನ್ನು ಮಾಡಿರೋದು ಬೆಳಕಿಗೆ ಬಂದಿದೆ.
ಆಂಧ್ರದ ಗೋದಾವರಿಯಲ್ಲಿ ಘಟನೆ ನಡೆದಿದ್ದು, ರಿಯಲ್ ಎಸ್ಟೇಟ್ ನಲ್ಲಿ ಕೈಸುಟ್ಟುಕೊಂಡು ಕೊನೆಗೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವೆಲ್ಲಂಕಿ ಸಿಂಹಾದ್ರಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆ ಹರಿಸೋದಾಗಿ ಜನರಿಗೆ ನಂಬಿಸಿ ಅವರಿಗೆ ಸೈನೆಡ್ ನೀಡಿ ನಗದು, ಚಿನ್ನಾಭರಣವನ್ನು ಈ ಖದೀಮ ದೋಚುತ್ತಿದ್ದನು.