ಶಿಕ್ಷಣ ಕೇವಲ ಬದುಕಲು ಅಲ್ಲ ಶಿಕ್ಷಣ ಗೆಲುವುದನ್ನು ಕಲಿಸುತ್ತದೆ.ಶಿಕ್ಷಣ ಸೋಲಿನೊಂದಿಗೆ ಸಮಾಜದ ಜನರ ನಡುವೆ ಬದುಕುವುದನ್ನು ಕಲಿಸುತ್ತದೆ.ನಾವು ಪಡೆದ ಶಿಕ್ಷಣ ಕೇವಲ ಸಂಪಾದನೆಯ ಮಾರ್ಗವಾಗಿರದೆ ಸಮಾಜದ ಮಾರ್ಗದಲ್ಲಿಯೂ ನಡೆಯಬೇಕು ಶಿಕ್ಷಣ ಜೀವನಕ್ಕಾಗಿ ಜೀವನ ರಾಷ್ಟ್ರಕ್ಕಾಗಿ ಎಂಬ ನುಡಿಗಳನ್ನು ಎಂ. ಪಿ. ವೀಣಾ ಮಹಾಂತೇಶ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು ಹಾಗೂ ಪ್ರಪಂಚವನ್ನು ಬದಲಾಯಿಸಲು ಬಳಸಬಹುದಾದ ಅತೀ ಪ್ರಬಲ ಅಸ್ತ್ರವೆಂದರೆ ಅದುವೇ ಶಿಕ್ಷಣ ಎಂದು ತಿಳಿಸಿದರು. ಮುಂದಿನ ಎಲ್ಲ ವಿದ್ಯಾರ್ಥಿ ಗಳ ಜೀವನ ಸದಾ ಸಾಧನೆಯತ್ತ ಸಾಗಲಿ ಭವಿಷ್ಯದಲ್ಲಿ ಉತ್ತಮ ನಾಯಕರು ನೀವು ಆಗಬೇಕು ಎಂದು ಮನ ತುಂಬಿ ಹಾರೈಸಿದರು.
ಈ ಸಂದರ್ಭದಲ್ಲಿ ದೀಪಾ, ಪೃಥ್ವಿ,ಯಶವಂತ್, ನಾಗರತ್ನ, S ನೇತ್ರಾವತಿ,R.G.ಗುರುರಾಜ್,A ಹಾಲೇಶ್, H. ಕಾದಂಬರಿ,M. K. ಅರ್ಚನಾ, K.ಜಯಶೀಲಾ ಈ ವಿದ್ಯಾರ್ಥಿ ಗಳನ್ನು ಸನ್ಮಾನಿಸಿದರು.