ಐಪಿಎಲ್ 2022: ಅಭಿಮಾನಿಗೆ ಜೆರ್ಸಿ ಗಿಫ್ಟ್ ಕೊಟ್ಟ ಟ್ರೆಂಟ್ ಬೌಲ್ಟ್
ಮೈದಾನದಲ್ಲಿ ತನ್ನನ್ನು ಬೆಂಬಲಿಸುತ್ತಿದ್ದ ಬಾಲಕನಿಗೆ ತೊಟ್ಟಿದ್ದ ಜೆರ್ಸಿ ತೆಗೆದು ಇನ್ನೊಬ್ಬ ಆಟಗಾರನ ಮೂಲಕ ತಲುಪಿಸಿದ್ದಾರೆ. ಜೆರ್ಸಿ ಪಡೆದ ಬಾಲಕ ಅದನ್ನು ತೊಟ್ಟುಕೊಂಡು ಸಂಭ್ರಮಿಸಿದ್ದಾನೆ.
ಜೊತೆಗೆ ಬೌಲ್ಟ್ ಗೆ ತನ್ನ ಶರ್ಟ್ ತೆಗೆದು ಕೊಡಲು ಮುಂದಾಗಿದ್ದಾನೆ. ಆಗ ಬೌಲ್ಟ್ ಬೇಡವೆನ್ನುವಂತೆ ಸನ್ನೆ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.