ಮುಗ್ಧ ಮಗುವಿನ ಪಾಲಿಗೆ ಹೆತ್ತಮ್ಮನೇ ಕೊಲೆಗಾತಿ?

ಗುರುವಾರ, 17 ಫೆಬ್ರವರಿ 2022 (11:48 IST)
ಚಿಕ್ಕಬಳ್ಳಾಪುರ: 10 ವರ್ಷದ ಬಾಲಕಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಘಟನೆ ಹಿಂದೆ ಈಗ ಹಲವು ಅನುಮಾನಗಳು ಮೂಡಿವೆ.

ಚಿಂತಾಮಣಿ ತಾಲೂಕಿನಲ್ಲಿ ಘಟನೆ ನಡೆದಿತ್ತು. ನಾಲ್ಕನೇ ತರಗತಿ ಓದುತ್ತಿದ್ದ 10 ವರ್ಷದ ಹೆಣ್ಣು ಮಗು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಬಗ್ಗೆ ತಾಯಿಯೇ ಅನುಮಾನಸ್ಪದ ಸಾವು ಎಂದು ಪೊಲೀಸರಿಗೆ ದೂರು ನೀಡಿದ್ದಳು.

ಆದರೆ ಮಗುವಿನ ತಂದೆ ಇದು ಆಕಸ್ಮಿಕ ಘಟನೆಯಲ್ಲ, ತಾಯಿಯೇ ಕೊಲೆ ಮಾಡಿರಬಹುದು ಎಂದು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೌಟುಂಬಿಕ ಕಲಹದ ಕಾರಣದಿಂದ ಮಗುವಿನ ತಂದೆ-ತಾಯಿ ಕೆಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದಾರೆ. ಈ ಘಟನೆಗೂ ಕೌಟುಂಬಿಕ ಕಲಹವೇ ಕಾರಣವಾಯ್ತಾ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ