ನನ್ನ ಒಬ್ಬನನ್ನು ಸಮೀಕ್ಷೆ ಮಾಡಲು ಇಷ್ಟೊಂದು ಜನ ಬೇಕಾ: ವಿ ಸೋಮಣ್ಣ ಕ್ಲಾಸ್

Krishnaveni K

ಭಾನುವಾರ, 5 ಅಕ್ಟೋಬರ್ 2025 (11:43 IST)
ಬೆಂಗಳೂರು: ಕರ್ನಾಟಕ ರಾಜ್ಯ ನಡೆಸುತ್ತಿರುವ ಸಾಮಾಜಿಕ, ಜಾತಿ, ಶೈಕ್ಷಣಿಕ ಸಮೀಕ್ಷೆಗೆ ಅಧಿಕಾರಿಗಳು ಮನೆಗೆ ಬಂದಾಗ ಕೇಂದ್ರ ಸಚಿವ ವಿ ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಚಿವ ಸೋಮಣ್ಣ ನಿವಾಸಕ್ಕೆ ಇಂದು ಅಧಿಕಾರಿಗಳ ದಂಡೇ ಜಾತಿಗಣತಿಗೆಂದು ಬಂದಿತ್ತು. ಒಬ್ಬರ ಮನೆಗೆ ಇಷ್ಟೊಂದು ಮಂದಿ ಬಂದಿರುವುದು ಸೋಮಣ್ಣ ಆಕ್ಷೇಪಕ್ಕೆ ಕಾರಣವಾಯಿತು. ತಮ್ಮ ನಿವಾಸಕ್ಕೆ ಬಂದ ಅಧಿಕಾರಿಗಳನ್ನು ಎದುರಿಗೆ ಕೂರಿಸಿಕೊಂಡು ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ.

ನನ್ನ ಒಬ್ಬನ ಸಮೀಕ್ಷೆ ನಡೆಸಲು ಇಷ್ಟೊಂದು ಅಧಿಕಾರಿಗಳು ಬರುವ ಅಗತ್ಯವಿತ್ತೇ? ಸಮೀಕ್ಷೆಯಲ್ಲಿ ಇಷ್ಟೊಂದು ಪ್ರಶ್ನೆಗಳು ಯಾಕೆ? ಸರ್ಕಾರೀ ಅಧಿಕಾರಿಗಳಾಗಿ ನೀವು ಸರ್ಕಾರಕ್ಕೆ ಸಲಹೆ ನೀಡಬೇಕು. ಅದರ ಬದಲು ಅವರ ಏಜೆಂಟರಂತೆ ಕೆಲಸ ಮಾಡಬಾರದು ಎಂದು ಬುದ್ಧಿ ಹೇಳಿದ್ದಾರೆ.

ಇನ್ನು, ನಮ್ಮ ಕೇಂದ್ರ ಸರ್ಕಾರ ಸದ್ಯದಲ್ಲೇ ಜಾತಿಗಣತಿ ಮಾಡುತ್ತದೆ. ಆಗಲೂ ನೀವೇ ಗಣತಿ ಮಾಡಬೇಕಾಗುತ್ತದೆ. ನಾವು ಹೇಗೆ ಮಾಡುತ್ತೇವೆ ನೋಡುತ್ತಿರಿ ಎಂದಿದ್ದಾರೆ. ಇನ್ನು, ಆನ್ ಲೈನ್ ಆಯ್ಕೆ ಇಟ್ಟುಕೊಂಡಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದು ಇದನ್ನೆಲ್ಲಾ ಅಕ್ಷರ ಜ್ಞಾನ ಇಲ್ಲದವರು ಹೇಗೆ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ