100 ರೂ. ಬಾಕಿಯಿದ್ರೂ ವಿದ್ಯುತ್ ಸಂಪರ್ಕ ಕಟ್!
ಬೆಂಗಳೂರು : ಗೃಹಜ್ಯೋತಿ ಅನುಷ್ಠಾನ ಬಳಿಕ ಗ್ರಾಹಕರಿಂದ ಕೋಟ್ಯಾಂತರ ರೂ ಕರೆಂಟ್ ಬಾಕಿ ಉಳಿದಿದ್ದು ಈ ಹಿನ್ನೆಲೆಯ್ಲಲಿ ಬಾಕಿ ಕರೆಂಟ್ ಬಿಲ್ ಕಟ್ಟದ ಗ್ರಾಹಕರಿಗೆ ಮೀಟರ್ ರೀಡರ್ ಗಳಿಂದ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ವಿದ್ಯುತ್ ಪೂರೈಕೆ ಘೋಷಣೆಯಾದಾಗಿನಿಂದ ಬೆಸ್ಕಾಂಗೆ ಹೊಸ ಸಮಸ್ಯೆಯೊಂದು ಎದುರಾಗಿದೆ. ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರು ವಿಳಂಬ ಮಾಡುತ್ತಿದ್ದು, ಇನ್ನು ಮುಂದೆ 100 ರೂ. ಬಾಕಿಯಿದ್ದರೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ಎಚ್ಚರಿಕೆ ನೀಡಿದೆ.
ಕಟ್ಟುನಿಟ್ಟಾಗಿ ವಿದ್ಯುತ್ ಬಿಲ್ ಕಲೆಕ್ಷನ್ ಮಾಡುವಂತೆ ಮೀಟರ್ ರೀಡರ್ ಗಳಿಗೆ ವಿದ್ಯುತ್ ಕಂಪನಿಗಳು ಸೂಚನೆ ನೀಡಿದ್ದು, ಇದರಿಂದ ವಿದ್ಯುತ್ ಬಿಲ್ ವಸೂಲಿ ಸಿಬ್ಬಂದಿಗಳು ಗ್ರಾಹಕರ ಬಳಿ ಒತ್ತಡ ಹಾಕಿ ಕರೆಂಟ್ ಬಾಕಿ ಬಿಲ್ ಕಟ್ಟಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.