ಬೆಂಗಳೂರಲ್ಲಿ ನಾಳೆ 101 ಇಂದಿರಾ ಕ್ಯಾಂಟೀನ್`ಗಳಿಗೆ ಚಾಲನೆ
ಕೇವಲ 2 ತಿಂಗಳುಗಳಲ್ಲಿ 101 ಕ್ಯಾಂಟೀನ್`ಗಳನ್ನ ನಿರ್ಮಾಣ ಮಾಡಿರುವುದು ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲು ಎಂದು ಸಚಿವರು ಹೇಳಿದ್ದಾರೆ. ಪ್ರತಿ ನಿತ್ಯ 3 ಲಕ್ಷ ಜನರಿಗೆ ಈ ಕ್ಯಾಂಟೀನ್`ಗಳಲ್ಲಿ ಕಡಿಮೆ ದರದಲ್ಲಿ ಊಟ ಮತ್ತು ತಿಂಡಿ ನೀಡಲಾಗುತ್ತದೆ. 10 ರೂಪಾಯಿಗೆ ಊಟ ಮತ್ತು 5 ರೂಪಾಯಿಗೆ ಉಪಾಹಾರ ನೀಡಲಾಗುತ್ತದೆ.