ಆರ್ಥರೈಟಿಸ್ ಬರದಂತೆ ತಡೆಯಲು ಈ ಮೂರು ಕೆಲಸ ತಪ್ಪದೇ ಮಾಡಿ

Krishnaveni K

ಶುಕ್ರವಾರ, 31 ಅಕ್ಟೋಬರ್ 2025 (11:50 IST)
ಇತ್ತೀಚೆಗಿನ ದಿನಗಳಲ್ಲಿ ಬಹುತೇಕ ಮಂದಿ ಆರ್ಥರೈಟಿಸ್ ನೋವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣಗಳಲ್ಲಿ ಪ್ರಮುಖವಾದುದು ನಮ್ಮ ಜೀವನ ಶೈಲಿ. ಆರ್ಥರೈಟಿಸ್ ಬರದಂತೆ ತಡೆಯಲು ನೀವು ಈ ಮೂರು ಕೆಲಸಗಳನ್ನು ತಪ್ಪದೇ ಮಾಡಬೇಕು.

ದೇಹ ತೂಕ ಕಾಪಾಡಿಕೊಳ್ಳಿ
  1. ಮುಖ್ಯವಾಗಿ ನಮ್ಮ ಕೀಲುಗಳಿಗೆ ಹೆಚ್ಚು ಒತ್ತಡ ಬೀಳದಂತೆ ಎಚ್ಚರಿಕೆ  ವಹಿಸಬೇಕು. ಇದಕ್ಕೆ ಆರೋಗ್ಯಕರ ದೇಹ ತೂಕ ಹೊಂದಿರಬೇಕು. ವಿಶೇಷವಾಗಿ ಮೊಣಕಾಲು, ಮೊಣಕೈಯಂತಹ ಕೀಲುಗಳ ಭಾಗಕ್ಕೆ ಹೆಚ್ಚು ಒತ್ತಡ ಬೀಳದಂತೆ ಎಚ್ಚರ ವಹಿಸಬೇಕು.
 
  1. ಫ್ಯಾಟ್ ಟಿಶ್ಯೂ ಉರಿಯೂತದ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇದು ರುಮಟಾಯ್ಡ್ ಆರ್ಥರೈಟಿಸ್ ಗೆ ಕಾರಣವಾಗಬಹುದು. ಇದನ್ನು ತಡೆಯಲು ದೇಹ ತೂಕ ಆರೋಗ್ಯಕರವಾಗಿರಬೇಕು.
 
  1. ನಿಯಮಿತವಾಗಿ ಹಗುರ ವ್ಯಾಯಾಮ ಮಾಡಿ: ಜಡ ಹಿಡಿದವರಂತೆ ಒಂದೇ ಕಡೆ ಕೂರುತ್ತಿರಬೇಡಿ. ನಿಮ್ಮ ಎಲ್ಲಾ ಅಂಗಾಂಗಳಿಗೂ ಚಟುವಟಿಕೆ ನೀಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಅಥವಾ ಹಗುರ ವ್ಯಾಯಾಮಗಳನ್ನು ಮಾಡಿ. ಇದರಿಂದ ಕೀಲುಗಳು ಹೆಚ್ಚು ಬಲಯುತಗೊಳ್ಳುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ