2 ತಿಂಗಳಲ್ಲಿ ‘108’ ಸಮಸ್ಯೆ ಪರಿಹರಿರ್ತೀವಿ

ಮಂಗಳವಾರ, 11 ಅಕ್ಟೋಬರ್ 2022 (17:07 IST)
ರಾಜ್ಯದಲ್ಲಿ 108 ತುರ್ತು ಸೇವೆಯಲ್ಲಿ ಸಮಸ್ಯೆ ಆಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್​​​ ಪ್ರತಿಕ್ರಿಯೆ ನೀಡಿದ್ದಾರೆ. ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 108 ತುರ್ತು ಆ್ಯಂಬುಲೆನ್ಸ್​​​​​​ ಸೇವೆ 2006-07ರಲ್ಲಿ ಪ್ರಾರಂಭ ಮಾಡಲಾಗಿತ್ತು. ಆಗ ಅದರ ನಿರ್ವಹಣೆಯನ್ನು ಟೆಂಡರ್​​ ಮೂಲಕ ನೀಡಲಾಗ್ತಿರಲಿಲ್ಲ. ನಂತರ ಟೆಂಡರ್​​​ನಲ್ಲಿ ನಿರ್ವಹಣೆ ಆರಂಭಿಸಲಾಗಿದ್ದು, ಸತ್ಯಂ ಅನ್ನುವ ಸಂಸ್ಥೆಗೆ ನಿರ್ವಹಣೆ ಜಬಾಬ್ದಾರಿ ನೀಡಲಾಗಿತ್ತು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ನಂತರ‌ J.V.K ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿದೆ. ಇದೀಗ ಇತ್ತೀಚೆಗೆ ಸಮಸ್ಯೆಯಾಗ್ತಿದ್ದು, ಈ ಸಂಸ್ಥೆ ಸರಿಯಾಗಿ ಸೇವೆ ನೀಡ್ತಿಲ್ಲ ಎಂದು ಹೇಳಿದ್ರು.
ಮುಂದುವರೆದ ದೇಶದಲ್ಲಿ ಯಾವ ರೀತಿ ಆ್ಯಂಬುಲೆನ್ಸ್​​​ ಸೇವೆ ವ್ಯವಸ್ಥೆ ಇದೆ. ಆ ರೀತಿ ಸೇವೆ ನೀಡುವುದು ಹೇಗೆ ಎಂದು ವರದಿ ನೀಡಲು ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಸಮಿತಿ‌ ನೀಡಿದ ವರದಿಯ ಆಧಾರದ ಮೇಲೆ ಟೆಂಡರ್ ಕರೆಯಲಾಗಿದೆ. ಮುಂದೆ ಇಂತಹ ಸಮಸ್ಯೆ ಆಗದಂತೆ ಮಾದರಿ ತುರ್ತು ಅಂಬ್ಯುಲೆನ್ಸ್ ಸೇವೆ ರಾಜ್ಯದಲ್ಲಿ ನೀಡಲಾಗುವುದು.  2 ತಿಂಗಳಲ್ಲಿ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ