ಕಾಂಗ್ರೆಸ್PAYCM ಅಭಿಯಾನಕ್ಕೆ‌ ಸಚಿವ ಸುಧಾಕರ್ ತಿರುಗೇಟು

ಶನಿವಾರ, 24 ಸೆಪ್ಟಂಬರ್ 2022 (21:16 IST)
ಕಾಂಗ್ರೆಸ್ ನ ಪೇಸಿಎಂ ಅಭಿಯಾನಕ್ಕೆ ಆರೋಗ್ಯ ಸಚಿವ ಸುಧಾಕರ್ ತಿರುಗೇಟು ಕೊಟ್ಟಿದ್ದಾರೆ, ಕಾಂಗ್ರೆಸ್‌ನವರು ಇಷ್ಟು ಕೆಳ ಹಂತಕ್ಕೆ ಹೋಗಿ ರಾಜಕೀಯ ಮಾಡೋದ್ರಲ್ಲಿ ನಿಸ್ಸೀಮರು ಅಂತ ಗೊತ್ತಾಗ್ತಿದೆ,ಈ ಮೂಲಕ ಕಾಂಗ್ರೆಸ್ ದೇಶದ ಮುಂದೆ ಬೆತ್ತಲಾಗಿದೆ. ಕಾಂಗ್ರೆಸ್‌ನ ಅನೇಕರಿಗೆ ವಯಸ್ಸಾಗಿದೆ .ಹೇಗಾದ್ರೂ ಮಾಡಿ ವೈಯಕ್ತಿಕ ಲಾಭಕ್ಕೊಸ್ಕರ ಪೇ ಸಿಎಂ ಅಂತ ಮಾಡಿದ್ದಾರೆ. ರಾಜಕೀಯ ದುರುದ್ದೇಶದ ಅಭಿಯಾನ ಇದು ಇವರೆಲ್ಲರೂ ಸತ್ಯ ಹರಿಶ್ಚಂದ್ರರಾ.ಎಷ್ಟು ಜನ ಕಾಂಗ್ರೆಸ್ಸಿಗರು ಜೈಲಿಗೆ ಹೋಗಿ ಬಂದಿದ್ದಾರೆ,ಎಷ್ಟು ಜನ ಬೇಲ್‌ನಲ್ಲಿದ್ದಾರೆ.
 
ನಾಚಿಕೆ ಆಗಲ್ವಾ ಅವ್ರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ. ಅವರ ಹಿರಿಯ ನಾಯಕರೇ ಬೇಲ್ ಮೇಲೆ ಇದ್ದಾರೆ ಯಾವ ನೈತಿಕತೆ ಇದೆ ಅವ್ರಿಗೆ ಈ ಬಗ್ಗೆ ಮಾತನಾಡೋಕೆ. ಕರ್ನಾಟಕದ ರಾಜಕೀಯ ಘನತೆಯನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ ಇದರಲ್ಲಿ ಯಾವ ಹಿಟ್ ಇಲ್ಲ ರನ್ ಇಲ್ಲ, ‌ಕೇವಲ ರಾಜಕೀಯ ದುರುದ್ದೇಶದಿಂದ ಮಾಡ್ತಿದ್ದಾರೆ, ಏನೇ ಆದ್ರೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ .1,2% ಕಾಂಗ್ರೆಸ್‌ಗೆ  ಅವಕಾಶಗಳಿತ್ತು ಆದ್ರೆ ಈ ರೀತಿಯ ಅಭಿಯಾನದಿಂದ ಅವ್ರು ಅದನ್ನು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ