ಆದಾಯ ತೆರಿಗೆ ಪಾವತಿಸುವವರು, ವಾರ್ಷಿಕ ಆದಾಯ 1.20 ಲಕ್ಷ ರೂ.ಗಿಂತ ಅಧಿಕವಿದ್ದರೆ, ಸ್ವಂತ ವಾಣಿಜ್ಯ ವಾಹನಗಳು, 5 ಎಕರೆ ಅಥವಾ ತತ್ಸಮಾನ ನೀರಾವರಿ ಜಮೀನು ಹೊಂದಿರುವವರ ಬಿಪಿಎಲ್ ಕಾರ್ಡ್ ಅನರ್ಹರ ಪಟ್ಟಿಗೆ ಸೇರ್ಪಡೆಯಾಗಲಿದೆ. ಹೀಗಾಗಿ ನಿಮ್ಮ ಖಾತೆ ಕೂಡಾ ಈ ವರ್ಗಕ್ಕೆ ಸೇರಿದೆಯೇ ಎಂದು ಚೆಕ್ ಮಾಡಿ. ಹಾಗಿದ್ದಲ್ಲಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಲಿದೆ.
ಇದಲ್ಲದೆ 6 ತಿಂಗಳವರೆಗೆ ಪಡಿತರ ಪಡೆಯದವರು, ಒಂದು ವರ್ಷದವರೆಗೆ ನೇರ ನಗದು ಸೌಲಭ್ಯ ಪಡೆಯದೇ ಇರುವವರ ಬಿಪಿಎಲ್ ಕಾರ್ಡ್ ಕೂಡಾ ರದ್ದಾಗಲಿದೆ. ಅನರ್ಹರ ಪಟ್ಟಿಯಲ್ಲಿ ಸುಮಾರು 20 ಲಕ್ಷ ಕಾರ್ಡ್ ಇರಬಹುದು ಎಂದು ಸಚಿವರು ಅಂದಾಜಿಸಿದ್ದಾರೆ. ಎಲ್ಲಾ ಅರ್ಹತೆಗಳಿದ್ದೂ ಯೋಜನೆಗಳನ್ನು ಪಡೆಯದೇ ಇರುವ ಕಾರಣಕ್ಕೆ ಕಾರ್ಡ್ ರದ್ದಾಗಿದ್ದರೆ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.