ಚಿಕ್ಕಬಳ್ಳಾಪುರು: ರಾಜ್ಯ ಸರ್ಕಾರ ನಡೆಯಿಂದ ಯಾರೂ ಸಂತೋಷವಾಗಿಲ್ಲ. ರಾಜ್ಯದಲ್ಲಿ ಹೊಸ ಕಂಪೆನಿಗಳು ಬರೋದು ಇರಲಿ, ಇಲ್ಲಿರುವ ಕಂಪೆನಿಗಳನ್ನು ಹೇಗೆ ಉಳಿಸಿಕೊಳ್ಳುವುದು ದೊಡ್ಡ ವಿಷಯವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಅವರು ಕಿಡಿಕಾರಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಬಳಿ, ಬೆಂಗಳೂರಿನ ರಸ್ತೆ ಗುಂಡಿ ವಿಚಾರವಾಗಿ ರಾಜ್ಯ ಸರ್ಕಾರದ ನಡೆ ಬಗ್ಗೆ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರದ ನಡೆಯಿಂದ ಯಾರೂ ಸಂತೋಷವಾಗಿಲ್ಲ. ಬಂದಿರುವ ಉದ್ದಿಮೆದಾರರನ್ನೇ ಕಾಂಗ್ರೆಸ್ ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಎಸ್‌ಎಂ ಕೃಷ್ಣ ಅವರ ದೂರದೃಷ್ಟಿಯಿಂದ ರಾಜ್ಯದಲ್ಲಿ ಐಟಿ ಇಷ್ಟರ ಮಟ್ಟಿಗೆ ಬೆಳೆದಿದೆ ಬಿಟ್ರೆ ಇಂತಹ ಪುಣ್ಯಾತ್ಮರು ಅವತ್ತು ಇದ್ದಿದ್ರೆ ಕರ್ನಾಟಕ, ಇನ್ನೊಂದು ಬಿಹಾರ ಇಲ್ಲದಿದ್ರೆ ಉತ್ತರ ಪ್ರದೇಶವಾಗಿರುವುದು ಎಂದರು.
ದೂರದೃಷ್ಟಿಯ ಎಸ್‌ಎಂ ಕೃಷ್ಣ ಹಾಗೂ ದೇವೇಗೌಡ ಅವರು ಅವತ್ತು ಮುಖ್ಯಮಂತ್ರಿಯಾಗಿದ್ದರಿಂದ ನಮ್ಮ ರಾಜ್ಯ ಬಚಾವ್ ಆಗಿದೆ. ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿದ ಉದ್ದಿಮೇದಾರರು, ಕಂಪೆನಿಗಳು ಬೆಂಗಳೂರಿನ ರಸ್ತೆ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ. ದೂರು ಹೇಳುವವರಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ನಿಮ್ಮ ಸಿಆರ್‌ಎಸ್ ಫಂಡ್‌ನಿಂದ ಹಣ ತಂದು ಸರಿ ಮಾಡಿ ಎಂದು ಹೇಳುವ ಸ್ಥಿತಿಗೆ ರಾಜ್ಯ ಸರ್ಕಾರ ಬಮದಿದೆ.