ಎರಡು ಬೇಯಿಸಿದ ಮೊಟ್ಟೆಗೆ 1700ರೂ. ಶುಲ್ಕ ವಿಧಿಸಿದ ಮುಂಬೈ ಹೋಟೆಲ್

ಸೋಮವಾರ, 12 ಆಗಸ್ಟ್ 2019 (08:26 IST)
ಮುಂಬೈ : ಇತ್ತೀಚೆಗೆ 2 ಬಾಳೆಹಣ್ಣಿಗೆ ಅತಿ ಹೆಚ್ಚಿನ ಶುಲ್ಕ ವಿಧಿಸಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು, ಇದೀಗ 2 ಮೊಟ್ಟೆಗೆ ಅತಿ ಹೆಚ್ಚಿನ ಶುಲ್ಕ ವಿಧಿಸಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ನಟ ರಾಹುಲ್ ಬೋಸ್ ಗೆ 2 ಬಾಳೆಗಹಣ್ಣಿಗೆ ಹೊಟೇಲ್ ಮ್ಯಾರಿಯೆಟ್ 442ರೂ. ಬಿಲ್ ನೀಡಿ ಶಾಕ್ ನೀಡಿತ್ತು. ಇದರ ವಿಡಿಯೋವನ್ನು ರಾಹುಲ್ ಟ್ವಟರ್ ನಲ್ಲಿ ಶೇರ್ ಮಾಡಿದ್ದರು. ಇದು ಚರ್ಚೆಗೆ ಒಳಗಾಗಿತ್ತು. ಬಿಲ್ ನಲ್ಲಿ ತಾಜಾ ಹಣ್ಣುಗಳಿಗೆ ಜಿಎಸ್ ಟಿ ವಿಧಿಸಲಾಗಿದ್ದು, ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಲಾಗಿತ್ತು.


ಅದೇರೀತಿ ಇದೀಗ ಟ್ವೀಟರ್ ಬಳಕೆದಾರರೊಬ್ಬರು ಮುಂಬೈ ಹೋಟೆಲ್ ಬಿಲ್ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಎರಡು ಬೇಯಿಸಿದ ಮೊಟ್ಟೆಗೆ ಆ ವ್ಯಕ್ತಿಗೆ 1700 ರೂ. ಬಿಲ್ ನೀಡಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ