ಟ್ರಾಫಿಕ್ ಜಾಮ್ ನಿಂದಾ ಬೆಂಗಳೂರಿಗೆ 19 ಸಾವಿರ ಕೋಟಿ ನಷ್ಟ...!

ಶುಕ್ರವಾರ, 18 ಆಗಸ್ಟ್ 2023 (16:00 IST)
ಬೆಂಗಳೂರು ಆಂದ್ರೆ ಸಾಕು ಯಪ್ಪಾ ಯಾರಿಗೆ ಬೇಕು ಆ ಟ್ರಾಫಿಕ್ ಜಂಜಾಟ ಆಂತಾ ತಲೆ ಚಚ್ಚಿಕೊಳ್ಳೋ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಇನ್ನೂ ಇದರ ಬಗ್ಗೆ ಅನೇಕ ವರ್ಷಗಳಿಂದಲೂ ಚರ್ಚೆ ನಡೆಸಿದ್ರು ಯಾವುದೇ ರೀತಿಯ ಪರಿಹಾರ ಸಿಕ್ಕರಲಿಲ್ಲಾ. ಇನ್ನೂ ಸಂಚಾರ ದಟ್ಟಣೆ  ಬಗ್ಗೆ ಅದ್ಯಯನ ನಡೆಸಿದ ತಂಡವೊಂದು ಸರ್ಕಾರಕ್ಕೆ ಶಾಂಕಿಗ್ ಸಂಗತಿಯನ್ನು ತನ್ನ ವರದಿ ಮೂಲಕ ನೀಡಿದೆ. ಹೌದು ನಗರದ ಸಂಚಾರ ದಟ್ಟಣೆಯಿಂದಾಗಿ ಸುಮಾರು  19 ಸಾವಿರ ಕೋಟಿಗಳಷ್ಟು ನಷ್ಟವಾಗುತ್ತಿದೆ ಎಂದು ಬೆಚ್ಚಿಬೀಳಿಸುವ ವರದಿ ನೀಡಿದೆ. ಹತ್ತಾರು ಜಂಕ್ಷನ್ ಗಳ ಬಳಿ ಪರೀಶಿಲಾನೆ ನಡೆಸಿದ್ದ ಬಳಿಕ ಶ್ರೀಹರಿ ಹಾಗೂ ತಂಡ ಬೆಂಗಳೂರು ಟ್ರಾಫಿಕ್ ಸಮಸ್ಯೆಯಿಂದಾಗಿ ಬಾರಿ ನಷ್ಟವನ್ನು ಅನುಭವಿಸುತ್ತಿದೆ ಎಂಬ ವರದಿಯನ್ನು ನೀಡಿದ್ದು ಸರ್ಕಾರಕ್ಕೆ ತಲೆ ನೋವು ತರಲು ಆರಂಭಿಸಿದೆ.

ಇನ್ನು ಬ್ರಾಂಡ್ ಬೆಂಗಳೂರು ಮಾಡಲು ಹೊರಟಿರುವ ಸರ್ಕಾರಕ್ಕೆ ಈ ಸಮಸ್ಯೆ ಗಂಬೀರವಾಗಿ ಕಾಡೋದಂತು ನಿಜ. ನಗರದಲ್ಲಿ ಪೀಕ್ ಆವರ್ ಗಳಲ್ಲಿ ವಾಹನಗಳ ವೇಗ ಕೇವಲ ಗಂಟೆಗೆ 8 ಕಿ.ಮೀ ಗಳಷ್ಟು ಇದ್ದು,ಆರೋಗ್ಯವಂತ ಮನುಷ್ಯ ನಡೆಯುವ ವೇಗಕ್ಕಿಂತಲು ವಾಹನಗಳ ವೇಗ ಕಡಿಮೆ ಯಾಗುತ್ತಿರುವುದು ವಿಪರ್ಯಾಸದ ಸಂಗತಿ ಇನ್ನೂ ನಗರದಲ್ಲಿನ ಅವೈಜ್ಞಾನಿಕ ಸಿಗ್ನಲ್ ಗಳಿಂದಾಗಿ  ಈ ಹೆಚ್ಚಾಗುತ್ತಿರುವ ಸಮಸ್ಯೆಹೆಚ್ಚಾಗುತ್ತಿದ್ದು,ತಮ್ಮ ಅಮೂಲ್ಯ ಸಮಯವನ್ನು ಬೆಂಗಳೂರಿಗರು ಟ್ರಾಫಿಕ್ ನಲ್ಲೆ ಕಳೆಯುತ್ತಿದ್ದಾರೆ, ಇನ್ನೂ ತಂಡ ನೀಡಿರೋ ವರದಿಯಲ್ಲಿ ಫ್ಯೂಲ್,ಸಮಯ,ಶಕ್ತಿ ಇವೆಲ್ಲವನ್ನೂ ದುಡ್ಡಿಗೆ ಪರಿವರ್ತಿಸಿದಾಗ ವಾರ್ಷಿಕವಾಗಿ ಬೆಂಗಳೂರಿಗೆ 19 ಸಾವಿರ ಕೋಟಿ ನಷ್ಟವಾಗುತ್ತಿದೆ ಎಂಬ ಶ್ರಿ ಹರಿ ವರದಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಸದ್ಯ ಡಿಸಿಎಂ ಅಂಗಳದಲ್ಲಿ ಈ ವರದಿ ಇದ್ದು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ