ಬೆಂಗಳೂರಿಗೆ 40% ಮಳೆ ಕೊರತೆ

ಗುರುವಾರ, 17 ಆಗಸ್ಟ್ 2023 (14:36 IST)
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಸ್ಟ್‌ ತಿಂಗಳಿನಲ್ಲೂ ಬೇಸಿಗೆ ರೀತಿಯ ವಾತಾವರಣ ಕಂಡು ಬರ್ತಿದೆ. ಮಳೆ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಉಷ್ಣಾಂಶ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಆಗಸ್ಟ್‌ ಮಧ್ಯ ಭಾಗದವರೆಗೆ ಮಳೆ ಪ್ರಮಾಣದಲ್ಲಿ ಶೇ. 40ರಷ್ಟು ಕೊರತೆ ಎದುರಾಗಿದೆ. ಅಲ್ಲಲ್ಲಿ ತುಂತುರು ಮಳೆ ಆಗಿರೋದು ಬಿಟ್ಟರೆ, ನಗರದಾದ್ಯಂತ ಮಳೆ ಕೊರತೆ ಕಾಡುತ್ತಿದೆ. ಆಗಾಗ ಮೋಡ ಕವಿದ ವಾತಾವರಣ ಕಂಡು ಬಂದರೂ ಕೂಡ ಮಳೆರಾಯನ ಮುನಿಸು ಮುಂದುವರೆದಿದೆ. ನೈರುತ್ಯ ಮುಂಗಾರು ಮಾರುತಗಳು ಜೂನ್ ತಿಂಗಳಲ್ಲಿ ತಡವಾಗಿ ಆರಂಭವಾಗುವ ಮೂಲಕ ರಾಜ್ಯದಲ್ಲಿ ಮಳೆ ಕೊರತೆ ಶುರುವಾಯ್ತು. ಜುಲೈನಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಅಬ್ಬರಿಸಿತಾದರೂ, ಆಗಸ್ಟ್‌ನಲ್ಲಿ ಮತ್ತೆ ಒಣ ಹವೆ ಮುಂದುವರೆದಿದೆ. ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಾತ್ರ ಅಲ್ಲಲ್ಲಿ ಭಾರೀ ಮಳೆ ಸುರಿದಿದೆ. ಆದರೆ. ಅದು ಕೆಲವು ಪ್ರದೇಶಗಳಿಗೆ ಸೀಮಿತವಾಗಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ