ನಿಮ್ಮ ಮಗುವನ್ನು ಈಗಲೇ ಒಂದನೇ ಕ್ಲಾಸ್ ಗೆ ಸೇರಿಸಬೇಡಿ: ಕಾರಣ ಇಲ್ಲಿದೆ

Krishnaveni K

ಶುಕ್ರವಾರ, 14 ಮಾರ್ಚ್ 2025 (09:16 IST)
Photo Credit: X
ಬೆಂಗಳೂರು: ಒಂದನೇ ತರಗತಿ ಸೇರಿಸಲು ನಿಮ್ಮ ಮಗುವಿಗೆ ಸರಿಯಾಗಿ ಆರು ವರ್ಷ ತುಂಬದೇ ಇದ್ದರೆ ಏನಾಗುತ್ತದೋ ಆಗಲಿ ಎಂದು ಸೇರಿಸಲು ಹೋಗಬೇಡಿ. ಕಾರಣ ಇಲ್ಲಿದೆ.

ಇತ್ತೀಚೆಗಷ್ಟೇ ಸರ್ಕಾರ ಒಂದನೇ ತರಗತಿಗೆ ಸೇರಿಸಲು ಮಗುವಿಗೆ 6 ವರ್ಷ ತುಂಬುವುದು ಕಡ್ಡಾಯ ಮಾಡಿತ್ತು. ಆದರೆ ಕೆಲವು ಮಕ್ಕಳಿಗೆ ಒಂದು ತಿಂಗಳು, ಎರಡು ತಿಂಗಳ ಕೊರತೆಯಿದೆ. ಹೀಗಾಗಿ ಒಂದು ವರ್ಷ ಮಗುವಿಗೆ ನಷ್ಟವಾಗುತ್ತದೆ ಎಂಬ ಆತಂಕದಲ್ಲಿ ಪೋಷಕರಿದ್ದಾರೆ. ಹೀಗಾಗಿ ಈ ವರ್ಷ ವಿನಾಯ್ತಿ ಕೊಡಿ ಎಂದು ಕೇಳುತ್ತಲೇ ಇದ್ದಾರೆ. ಇದಕ್ಕೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ.

ಆದರೆ ಈ ನಡುವೆ ಕೆಲವು ಖಾಸಗಿ ಶಾಲೆಗಳು ಒಂದನೇ ತರಗತಿಗೆ ಪ್ರವೇಶಾತಿ ಆರಂಭಿಸಿವೆ. ವಯಸ್ಸು ಕಡಿಮೆ ಇರುವ ಮಕ್ಕಳನ್ನೂ ದಾಖಲಾತಿ ಮಾಡಕೊಳ್ಳುತ್ತಿವೆ. ಇದರ ಬಗ್ಗೆ ಈಗ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ನಿಯಮ ಮೀರಿ ಮಕ್ಕಳನ್ನು ದಾಖಲಿಸಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಲೆಗಳು ತಮ್ಮ ದಾಖಲಾತಿ ಹೆಚ್ಚಿಸಲು ಒಂದೆರಡು ತಿಂಗಳು ವ್ಯತ್ಯಾಸವಾದರೆ ಪರವಾಗಿಲ್ಲ ಎನ್ನುವಂತೆ ಪೋಷಕರಿಗೆ ಸಲಹೆ ನೀಡಬಹುದು. ಆದರೆ ಹೀಗಂತ ನೀವು ಆಮಿಷಗಳಿಗೆ ಮರುಳಾಗಿ ಸರ್ಕಾರದ ಆದೇಶವಿಲ್ಲದೇ ಸೇರಿಸಲು ಹೋಗಬೇಡಿ. ಕೊನೆ ಕ್ಷಣದಲ್ಲಿ ಸರ್ಕಾರ ತನ್ನ ನಿಲುವು ಬದಲಿಸದೇ ಇದ್ದಲ್ಲಿ ನಿಮ್ಮ ಮಗುವಿನ ಭವಿಷ್ಯ ಹಾಳಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ