ಆರೆಸ್ಸೆಸ್ ಕಾರ್ಯಕರ್ತ ಶರತ್ ಕೊಲೆ ಕೇಸ್: ಇಬ್ಬರು ಆರೋಪಿಗಳ ಬಂಧನ

ಮಂಗಳವಾರ, 15 ಆಗಸ್ಟ್ 2017 (17:25 IST)
ಬಿ.ಸಿ. ರೋಡ್`ನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ನರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಸಹಿಪದ ಅಬ್ದುಲ್ ಶಾಫಿ, ಮತ್ತು ಚಾಮರಾಜನಗರದ ಪಿಎಫ್`ಐ ಕಾರ್ಯಕರ್ತ ಖಲೀಲ್ ವುಲ್ಲಾ ಬಂಧಿತರು. ಅಬ್ದುಲ್ ಶಾಫಿ ಸಹ ಪಿಎಫ್`ಐ ಕಾರ್ಯಕರ್ತ ಎನ್ನಲಾಗಿದೆ.
 

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಆರೋಪಿಗಳ ಬಂಧನದ ವಿಷಯವನ್ನ ಖಚಿತಪಡಿಸಿದ್ದಾರೆ. ಎಸ್ಪಿ, ಎಸ್ಪಿ, ಇನ್ಸ್`ಪೆಕ್ಟರ್ ಸೇರಿದಂತೆ 30 ಪೊಲೀಸ್ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಗಲು ರಾತ್ರಿ ಕಷ್ಟ ಪಟ್ಟಿದ್ದಾರೆ. ಮಂಗಳೂರು, ಬೆಂಗಳೂರು, ಕಾರವಾರ, ಹುಬ್ಬಳ್ಳಿ, ಕೇರಳ, ಮಹಾರಾಷ್ಟ್ರ, ತಮಿಳುನಾಡು ಜೈಲುಗಳಲ್ಲೂ ಪ್ರಕರಣದ ಬಗ್ಗೆ ತನಿಖೆ ಮತ್ತು ಶೋಧ ನಡೆಸಲಾಗಿದೆ ಎಂದು ಹರಿಶೇಖರನ್ ಹೇಳಿದ್ದಾರೆ.

ಕಾರ್ಯಾಚರಣೆ ನಡೆಸಿದ ತಂಡಕ್ಕೆ 25 ಸಾವಿರ ರೂ. ಬಹುಮಾನ ಘೋಷಿಸಿದ  ಹರಿಶೇಖರನ್, ಪ್ರಕರಣದಲ್ಲಿ ಇನ್ನೂ ಐದಾರು ಮಂದಿ ಕೈವಾಡವಿರುವ ಶಂಕೆ ಇದ್ದು,  ಕಾರ್ಯಾಚರಣೆ ಮುಮದುವರೆದಿದೆ ಎಂದು ತಿಳಿಸಿದರು. ಆರೋಪಿಗಳು ಸಂಚು ರೂಪಿಸಿದ ಸ್ಥಲದ ಬಗ್ಗೆಯೂ ಮಾಹಿತಿ ಇದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ