ರಾಜ್ಯದ ಈ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 2 ಕೊರೊನಾ ಕೇಸ್ ಪತ್ತೆ

ಮಂಗಳವಾರ, 19 ಮೇ 2020 (19:19 IST)
ಇದುವರೆಗೂ ಹಸಿರು  ವಲಯದಲ್ಲಿ  ಇದ್ದ  ಜಿಲ್ಲೆಯಲ್ಲಿ ಮೊಟ್ಟ  ಮೊದಲ  ಬಾರಿಗೆ  2 ಕೊರೊನಾ ಪ್ರಕರಣಗಳು  ಪತ್ತಯಾಗಿವೆ.

ಹೀಗಂತ ಚಿಕ್ಕಮಗಳೂರು  ಜಿಲ್ಲಾಧಿಕಾರಿ  ಡಾ . ಬಗಾದಿ  ಗೌತಮ್  ಮಾಹಿತಿ  ನೀಡಿದ್ದಾರೆ.

ಮೂಡಿಗೆರೆ  ತಾಲ್ಲೂಕಿನ ನಂದಿಕೆರೆ ಗ್ರಾಮದ 48 ವರ್ಷದ ವೈದ್ಯ ಹಾಗೂ  ತರೀಕೆರೆ  ತಾಲ್ಲೂಕಿನ  28 ವರ್ಷದ  ಗರ್ಭಿಣಿಗೆ ಕೊರೊನಾ  ಪಾಸಿಟಿವ್   ಇರುವುದು ಪತ್ತೆಯಾಗಿದೆ.

ಕೊರೊನಾ  ಸೋoಕಿತ  ವೈದ್ಯ  ಹಲವಾರು ರೋಗಿಗಳಿಗೆ ಚಿಕಿತ್ಸೆ  ನೀಡಿದ  ಮಾಹಿತಿ  ಇದ್ದು,  ಸಂಪರ್ಕಿತ ವ್ಯಕ್ತಿಗಳ ಪತ್ತೆ ಹಚ್ಚುವ  ಕಾರ್ಯ  ನಡೆದಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ