ಬೆಂಗಳೂರು: ನಾಗರಿಕರ ಸಮಸ್ಯೆ ಆಲಿಸುವ ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಆರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಸಾರ್ ಎಂದು ನಾಟಕವಾಡಿದ್ದಾರೆ. ಇದಕ್ಕೆ ಡಿಕೆಶಿ ಏನು ಮಾಡಿದರು ಗೊತ್ತಾ?
ಇಂದು ಕೆಆರ್ ಪುರಂ ವ್ಯಾಪ್ತಿಯಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದಾರೆ. ಅವರಿಗೆ ಸ್ಥಳೀಯ ಶಾಸಕ ಭೈರತಿ ಬಸವರಾಜು ಕೂಡಾ ಸಾಥ್ ನೀಡಿದ್ದಾರೆ. ವೇದಿಕೆಯಲ್ಲಿ ಮಹಿಳೆಯೊಬ್ಬರು ನನಗೆ 6 ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ದೂರು ನೀಡಿದ್ದಾಳೆ.
ಫ್ರೀ ಕರೆಂಟ್ ಸಿಗುತ್ತಿದೆ. ಆದರೆ 2 ಸಾವಿರ ರೂ. ಬಂದಿಲ್ಲ ಎಂದು ದೂರು ನೀಡಿದ್ದಾಳೆ. ಮಹಿಳೆಯ ಮಾತು ಕೇಳಿ ತಕ್ಷಣವೇ ಡಿಕೆ ಶಿವಕುಮಾರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ಹೇಳುತ್ತಿರುವುದು ಸುಳ್ಳು ಎಂದು ಹೇಳಿದ್ದಾರೆ.
ತಕ್ಷಣವೇ ಮಹಿಳೆಯ ಮೊಬೈಲ್ ಪಡೆದು ಪರಿಶೀಲನೆ ನಡೆಸಿದಾಗ ಅಲ್ಲಿ 2 ಸಾವಿರ ರೂ. ಜಮೆ ಆಗಿರುವುದು ಗೊತ್ತಾಗಿದೆ. ಇದರಿಂದ ಗರಂ ಆದ ಡಿಕೆ ಶಿವಕುಮಾರ್ ಏನಮ್ಮಾ ನಿನ್ನ ಮಾತು ಕೇಳಿಕೊಂಡು ಸಚಿವೆ ಲಕ್ಷ್ಮೀ ಅವರನ್ನೇ ಸಸ್ಪೆಂಡ್ ಮಾಡ್ತಿದ್ನಲ್ಲಾ? ಸದ್ಯ ಅವರು ಫೋನ್ ಎತ್ತಿಲ್ಲ. ಅಧಿಕಾರಿಗಳ ಬಳಿ ಕೇಳಿದ್ದೇ ಒಳ್ಳೇದಾಯ್ತು ಎಂದರು.