ಬಾರ್ ನಲ್ಲಿ ಕಿರಿಕ್ 2 ಗ್ಯಾಂಗ್ ಮಧ್ಯೆ ಹೊಡೆದಾಟ ..!!!

ಮಂಗಳವಾರ, 13 ಸೆಪ್ಟಂಬರ್ 2022 (15:02 IST)
ಲಾಂಗು ಮಚ್ಚು ಹಿಡಿದು ರೌಡಿಗಳು ಪುಂಡಾಟಿಕೆ ಮಾಡ್ತಿದ್ದಾರೆ.. ಮೊನ್ನೆ ಲಗ್ಗೆರೆ ಬಳಿಯ ಬಾರ್ ಒಂದರಲ್ಲೂ ಇದೇ ರೀತಿ ಲಾಂಗು ಬೀಸಿ ಭಯ ಸೃಷ್ಠಿ ಮಾಡಿದ್ದಾರೆ. ಇಲ್ಲಿ ಏಕಾ ಏಕಿ ಎರಡು ಗ್ಯಾಂಗ್ ಮಧ್ಯೆ ವಾರ್ ನಡೆದಿದೆ..
 
ಬಾರ್ ವೊಂದರಲ್ಲೇ ಎರಡು ಗ್ಯಾಂಗ್ ಗಳ‌ ಮಧ್ಯೆ ವಾರ್ ನಡೆದಿರೋ ಘಟನೆ ರಾಜಗೋಪಾಲ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.. ಸನ್ ರೈಸ್ ಅನ್ನೋ ಬಾರ್ ನಲ್ಲಿ ಏಕಾ ಏಕಿ ಒಂದು ಗ್ಯಾಂಗ್ ಲಾಂಗು ಮಚ್ಚು ತೆಗೆದು ಮತ್ತೊಂದು ಗ್ಯಾಂಗ್ ಮೇಲೆ‌ ದಾಳಿ ನಡೆಸಿದೆ.. ಎದುರಾಳಿ ಗ್ಯಾಂಗ್ ಕೈಯಲ್ಲೇ ಇದ್ದ ಬಿಯರ್ ಬಾಟಲ್ ತಗೊಂಡು ಪ್ರತಿರೋಧವೊಡ್ಡಿದೆ.. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನೋಡಿದೋರಿಗೆ ಒಂದೊಮ್ಮೆ ಎದೆ ಝಲ್ ಅನ್ನಿಸುವಂತಿದೆ..
 
ಅಂದ್ಹಾಗೆ ನಗರದ ಲಗ್ಗೆರೆ ಬಳಿ ಇರೋ ಬಾರ್ ನಲ್ಲಿ ನಡೆದಿರೋ ಘಟನೆ ಇದು.. ಇತ್ತೀಚೆಗೆ ಒಂದು ಗ್ಯಾಂಗ್ ಬಾರ್ ನಲ್ಲಿ ಎಣ್ಣೆ ಹೊಡೆಯೋಕೆ ಕುಳಿತಿರುತ್ತೆ..ಪಕ್ಕದಲ್ಲೇ ಇದ್ದ ಮತ್ತೊಂದು ಗ್ಯಾಂಗ್ ನವರ ಜೊತೆ ಎಣ್ಣೆ ಹೊಡೆಯೋ ವಿಚಾರಕ್ಕೆ ಗಲಾಟೆಯಾಗಿದೆ.. ಈ ವೇಳೆ ಬಿಯರ್ ಬಾಟಲ್ ಚೆಲ್ಲಿದ್ದಕ್ಕೆ ಮಾತುಕತೆ ಶುರುವಾಗಿ ಇಬ್ಬರ ಮಧ್ಯೆ ಜಗಳ ಶುರುವಾಗಿದೆ.. ಏಕಾ ಏಕಿ ಚೀಲದಲ್ಲಿ ಲಾಂಗ್ ತೆಗೆದಿದ್ದೇ ಕುಳಿತಿದ್ದ ರಾಜು ಮತ್ತು ಸ್ನೇಹಿತನ ಗ್ಯಾಂಗ್ ಮೇಲೆ ಇನ್ನೋಂದು ಗ್ಯಾಂಗ್ ಅಟ್ಯಾಕ್ ಮಾಡಿದೆ.. ಇದಕ್ಕೆ ಪ್ರತಿರೋಧ ಒಡ್ಡಿದ ರಾಜು ಗ್ಯಾಂಗ್ ಬಿಯರ್ ಬಾಟಲ್ ನಿಂದ ಎದುರಾಳಿಗೆ ಹೊಡೆದು ಓಡಿಸಿದೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ