ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೆ ಬಂದು ದಂಡ ವಿಧಿಸುತ್ತಾರೆ ..!!!

ಸೋಮವಾರ, 12 ಸೆಪ್ಟಂಬರ್ 2022 (16:36 IST)
ರಾಜಧಾನಿಯಲ್ಲಿ ಪದೇ-ಪದೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ದಂಡ ವಸೂಲಿ ಮಾಡುವುದೇ ಸಂಚಾರ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಂಡಿರುವ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ನಿಯಮ ಉಲ್ಲಂಘಿಸುವ ವ್ಯಕ್ತಿಗಳ ಮನೆಗೆ ತೆರಳಿ ನೋಟಿಸ್‌ ಕೊಟ್ಟು ದಂಡ ವಸೂಲಿಗೆ ಮುಂದಾಗಿದ್ದಾರೆ.
 
ಸಿಗ್ನಲ್‌ ಜಂಪ್‌, ಅತೀ ವೇಗದ ಚಾಲನೆ, ರಾಂಗ್‌ ಸೈಡ್‌ನ‌ಲ್ಲಿ ಚಲಾಯಿಸುವುದು, ಹೆಲ್ಮೆಟ್‌ ಹಾಗೂ ಸೀಟ್‌ ಬೆಲ್ಟ್ ಧರಿಸದಿರುವುದು ಸೇರಿ ಇನ್ನಿತರ ಸಂಚಾರ ನಿಯಮ ಉಲ್ಲಂಘಿಸಿದರೆ ಸಿಗ್ನಲ್‌ಗ‌ಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇನ್ನು ಕೆಲವೊಂದು ಬಾರಿ ಸಂಚಾರ ಪೊಲೀಸರೇ ನಿಯಮ ಉಲ್ಲಂ ಸುವ ವಾಹನದ ನಂಬರ್‌ ಅನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಾರೆ.
 
ಈ ಪೈಕಿ ನಿರಂತರ ಸಂಚಾರ ನಿಯಮ ಉಲ್ಲಂಘಿಸುವ ವಾಹನ ನೋಂದಣಿ ಸಂಖ್ಯೆಯನ್ನುಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸೆಂಟರ್‌ (ಟಿಎಂಸಿ) ಸಿಬ್ಬಂದಿ ಪತ್ತೆಹಚ್ಚುತ್ತಾರೆ. ನಂತರ ಸಾರಿಗೆ ಇಲಾಖೆಅಧಿಕಾರಿಗಳಿಂದ ಮಾಲೀಕರ ಮನೆಯ ವಿಳಾಸಪಡೆದು ಆಯಾ ವ್ಯಾಪ್ತಿಯ ಸಂಚಾರ ಪೊಲೀಸ್‌ ಠಾಣಾ ಸಿಬ್ಬಂದಿಗೆ ವಾಹನ ಮಾಲೀಕರ ಮನೆಯ ವಿಳಾಸದ ಕುರಿತು ಮಾಹಿತಿ ನೀಡುತ್ತಾರೆ. ಈ ಮಾಹಿತಿ ಆಧರಿಸಿ ಠಾಣೆಯ ಬೀಟ್‌ ಪೊಲೀಸರು ತಮ್ಮ ಕರ್ತವ್ಯದ ಅವಧಿಯಲ್ಲಿ ವಾಹನ ಮಾಲೀಕರ ಮನೆಗೆ ತೆರಳಿ ನೋಟಿಸ್‌ ಕೊಡುತ್ತಾರೆ. ಮಾಲೀಕರಿಗೆ ದಂಡ ಪಾವತಿಸುವಂತೆ ಸೂಚಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ