ಮನೆಯಲ್ಲಿ ಹಣ ಕಳ್ಳತನ ಬಗ್ಗೆ ಸಂದೀಪ್ ಲಾಲ್ ದೂರು ನೀಡಿದ್ದ. ಅದರೆ, ಎರಡು ಕೋಟಿ ರೂ. ಹಣ ರೀಕವರಿಯಾದ ಮೇಲೆ ಆತನೇ ದೂರುದಾರನೂ ಬೆಚ್ಚಿಬಿದ್ದಿದ್ದಾನೆ. ಎರಡು ಕೋಟಿ ಹಣದ ಮೂಲದ ಬಗ್ಗೆ ಸಂದೀಪ್ ಲಾಲ್ ಪೊಲೀಸರಿಗೆ ವಿವರ ಕೊಟ್ಟಿಲ್ಲ. ಹೀಗಾಗಿ ಈತನ ಹಣವನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ. ಜತೆಗೆ ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅಕ್ರಮ ಹಣ ಗಳಿಕೆ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನೀಕೆ ನಡೆಸಲಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ 'ಒನ್‌ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ಹಣ ಕಳೆದುಕೊಂಡ ಮಾಲೀಕ ಹಣ ಸಿಕ್ಕರೂ ಅದನ್ನು ಪಡೆಯಲಾಗದೇ ಇದೀಗ ಲೆಕ್ಕ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಕೇವಲ ಚಿಲ್ಲರೆ ಕಾಸಿಗಾಗಿ ಮನೆ ಬೀಗ ಒಡೆಯುತ್ತಿದ್ದ ಕಳ್ಳರು ಕೋಟಿ ಕೋಟಿ ಕದ್ದು ಸಿಕ್ಕಿಬಿದ್ದು ಮತ್ತೆ ಜೈಲಿಗೆ ಹೋಗಿದ್ದಾರೆ. ಡಿಸಿಪಿ ಹರೀಶ್ ಪಾಂಡೆ ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣ ಪತ್ತೆ ಮಾಡಿದ ಕುಮಾರಸ್ವಾಮಿ ಲೇಔಟ್ ಪೊಲೀಸರ ಕಾರ್ಯ ವೈಖರಿಯನ್ನು ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.