ಒಮಿಕ್ರಾನ್ ಹೊಸತಳಿ ಬಗ್ಗೆ ನಾವು ಅನೇಕರ ಬಳಿ ಸಂಪರ್ಕದಲ್ಲಿ ಇದ್ದೇವೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸೋಮವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ರದ್ದು ಮಾಡಲಾಗಿದೆ.ವಿಶ್ವದಲ್ಲಿ ನಾಲ್ಕನೇ ಅಲೆ ಬಗ್ಗೆ ಚರ್ಚೆ ನಡೆಯುತ್ತಿದೆ.
ನಮ್ಮಲ್ಲಿ ಶೇ. 90 ರಷ್ಟು ಜನ ಮಾಸ್ಕ್ ಹಾಕುತ್ತಿಲ್ಲ. ನಾವೂ ಕೂಡ ಅವರುಗಳ ಮೇಲೆ ಕೇಸ್ ಹಾಕುತ್ತಾ ಇಲ್ಲ. ಮಾಸ್ಕ್ ರದ್ದು ಮಾಡಿರುವ ಬಗ್ಗೆ ನಾವೇನೂ ಆದೇಶ ಮಾಡಿಲ್ಲ.
ಕರ್ನಾಟಕದಲ್ಲೂ ಮಾಸ್ಕ್ ಕಡ್ಡಾಯ ರದ್ದು ವಿಚಾರವಾಗಿ ಸಮಾಲೋಚನೆ ನಡೆಸುತ್ತೇವೆ. ಟಾಸ್ಕ್ ಪೋರ್ಸ್ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಸದ್ಯದಲ್ಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜಿನೋಮಿಕ್ ಸ್ವೀಕ್ವೆನ್ಸ್ ಟೆಸ್ಟ್ ಬಗ್ಗೆ ಐಸಿಎಂಆರ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಹಲಾಲ್ ಸರ್ಟಿಫಕೇಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಲಾಲ್ ಬಗ್ಗೆ ಪ್ರತಿಕ್ರಿಯಿಸಿ ಪ್ರಮಾಣಿಕರಿಸೋ ಬಗ್ಗೆ ನಮ್ಮ ಇಲಾಖೆಗೆ ಏನೂ ಬರುವುದಿಲ್ಲ. ಆಯಾ ವ್ಯಾಪ್ತಿಯ ಕಮಿಷನರ್ ನಿರ್ಧಾರ ಮಾಡುವುದು. ಆರೋಗ್ಯ ಇಲಾಖೆ ವ್ಯಾಪ್ತಿಗೆ ಹಲಾಲ್ ಸರ್ಟಿಫಿಕೇಟ್ ಕೊಡುವುದು ಬರುವುದಿಲ್ಲ ಎಂದರು.