ಫೆಬ್ರವರಿ 15ಕ್ಕೆ ರಾಜ್ಯ ಬಿಜೆಪಿ ಸರ್ಕಾರ 200ದಿನ ಪೂರೈಸುವ ಹಿನ್ನಲೆ; ಸರ್ಕಾರದ ಸಾಧನೆ ಜನತೆಗೆ ಪರಿಚಯಿಸಲು ಪ್ಲ್ಯಾನ್

ಮಂಗಳವಾರ, 4 ಫೆಬ್ರವರಿ 2020 (10:49 IST)
ಬೆಂಗಳೂರು : ಫೆಬ್ರವರಿ 15ಕ್ಕೆ ರಾಜ್ಯ ಬಿಜೆಪಿ ಸರ್ಕಾರ 200ದಿನ ಪೂರೈಸುವ ಹಿನ್ನಲೆ 200ದಿನದ ಸರ್ಕಾರದ ಸಾಧನೆ ಜನತೆಗೆ ಪರಿಚಯಿಸಲು ಪ್ಲ್ಯಾನ್ ಮಾಡಿದೆ.


ಈಗಾಗಲೇ 100ದಿನ ಪೂರೈಸಿದ ವೇಳೆ ಕಿರುಹೊತ್ತಿಗೆ ಮೂಲಕ ಸರ್ಕಾರದ ಸಾಧನೆಗಳನ್ನು ತಿಳಿಸಲಾಗಿತ್ತು. ಇದೀಗ 200ದಿನ ಪೂರೈಸುವ ಹಿನ್ನಲೆ ಫೆ.15ರಂದು ವಿಧಾನಸೌಧದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಅದಕ್ಕಾಗಿ ರಾಜ್ಯ ಸರ್ಕಾರದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಇಲಾಖಾವಾರು ಸಾಧನೆಯನ್ನು ಜನರ ಮುಂದಿಡಲು ನಿರ್ಧಾರ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ