ರಾಯಣ್ಣಗೌಡ ಸಲ್ಲಿಸಿದ್ದ ದೂರಿನ ಕುರಿತು ವಿಚಾರಣೆ ನಡೆಸಿದ ಬೆಂಗಳೂರು ನಗರದ 3ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು ಪ್ಯಾಂಟ್ ಬಟ್ಟೆಗೆ ಪಾವತಿಸಿದ 1998 ರೂ.ಗಳು, ಹೊಲಿಗೆ ವೆಚ್ಚ 550ಕ್ಕೆ ಶೇಕಡಾ 9ರ ಬಡ್ಡಿಯ ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿದ ಪರಿಣಾಮ 5000 ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ಹಲವು ದಿನಗಳ ಕಾಲ ಕಾನೂನು ಹೋರಾಟ ನಡೆಸಿದ ಪರಿಣಾಮ ಹೆಚ್ಚುವರಿಯಾಗಿ 5000 ರೂಗಳನ್ನು ನೀಡಬೇಕು ಎಂದು ಆದೇಶಿಸಿದ್ದಾರೆ.
2017ರಲ್ಲಿ ಟೈಲರ್‌ನ್ನು ಸಂಪರ್ಕಿಸಿದಾಗ, ಪ್ಯಾಂಟ್ ಕಾಲಿನ ಭಾಗದಲ್ಲಿ ಹರಿದು ಹೋಗಿ ಬಟ್ಟೆವಿನ್ಯಾಸ ವಿರೂಪಗೊಂಡಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ರಾಯಣ್ಣಗೆ ತಿಳಿಸಿದ ಟೈಲರ್‌ಗೆ ಹೊಸ ಬಟ್ಟೆ ಪ್ಯಾಂಟ್ ಹೊಲಿದು ಕೊಡುವುದಾಗಿ ಭರವಸೆ ನೀಡಿದ್ದರು. ಕೆಲ ದಿನಗಳ ಬಳಿಕ ಟೈಲರ್ ಬಳಿ ಹೋದಾಗ ಹೊಸ ಪ್ಯಾಂಟ್ ಹೊಲಿದಿಲ್ಲ ಎನ್ನುವುದಾಗಿ ಹೇಳಿ ಸುಮಾರು 5 ಬಾರಿ ಅಲೆದಾಡಿಸಿದ್ದ.
ಇದರಿಂದ ಬೇಸರಗೊಂಡಿದ್ದ ರಾಯಣ್ಣ 2017ರ ಫೆಬ್ರವರಿ 7ರಂದು ಮತ್ತೆ ಟೈಲರ್ ಸಂಪರ್ಕಿಸಿದರು. ಈ ವೇಳೆ, ನೀವು ಖರೀದಿಸಿದ್ದ ಗುಣಮಟ್ಟದ ಪ್ಯಾಂಟ್ ಮೇಟಿರಿಯಲ್ ಲಭ್ಯವಾಗುತ್ತಿಲ್ಲ ಎಂದು ವಿವರಿಸಿದ್ದರು. ಇದರಿಂದ ಮನನೊಂದಿದ್ದ ರಾಯಣ್ಣ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು.