206 ಜನರು ಕ್ವಾರಂಟೈನಿಂದ ನಾಪತ್ತೆ?

ಗುರುವಾರ, 4 ಜೂನ್ 2020 (18:13 IST)
ಕ್ವಾರಂಟೈನ್ ನಿಂದ 206 ಜನರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಾಯಚೂರು ಜಿಲ್ಲೆಯ ಕ್ವಾರಂಟೈನ್ ಕೇಂದ್ರದಿಂದ 206 ಜನರು ತಪ್ಪಿಸಿಕೊಂಡು  ಹೋಗಿದ್ದಾರೆಂದು ಬೆಂಗಳೂರಿನ ರಾಜ್ಯದ ಕೋವಿಡ್ ವಾರ್ ನವರಿಂದ ಮಾಹಿತಿ ಬಂದಿರುತ್ತದೆ. ಅದರಂತೆ ಈಗಾಗಲೇ ಮಸ್ಕಿ ಠಾಣೆಯಲ್ಲಿ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಈ 206 ಜನರ ವಿವರಗಳನ್ನು ಪರಿಶೀಲಿಸಿದಾಗ ಕೆಲವು ಜನರು ಮೊಬೈಲ್ ನಂಬರ್‌ ತಪ್ಪಾಗಿ ಕೊಟ್ಟಿದ್ದಾರೆ. ಒಂದಷ್ಟು ಮಂದಿ  ತಮ್ಮ ಮಕ್ಕಳ, ಸಂಬಂಧಿಕರ ಹಾಗೂ ತಮ್ಮ ಪರಿಚಯದವರ ನಂಬರ್ ಕೊಟ್ಟಿರುವುದು ಕಂಡು ಬಂದಿರುತ್ತದೆ.

ಕರೆ ಮಾಡಿದಾಗ ಅವರಿಗೆ ಹೋಗಿರುತ್ತವೆ. ಆದರೆ ವ್ಯಕ್ತಿಗಳನ್ನು ಪರಿಶೀಲನೆ ಮಾಡಿದಾಗ ಕ್ವಾರಂಟೈನ್ ನಲ್ಲಿಯೇ ಇದ್ದದ್ದು ಕಂಡು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಟವರ್ ಲೊಕೇಷನ್ ನಿಂದ ಸುಮಾರು 30 ಕಿಲೋ ಮೀಟರ್ ದೂರದವರೆಗೆ ರೆಂಜ್  ಕಂಡು ಬಂದಿರುತ್ತದೆ.

ಆದರೆ ಇಲ್ಲಿಯವರೆಗೆ ಯಾರೂ ಹೊರಗೆ ಹೋಗಿದ್ದು ಕಂಡು ಬಂದಿಲ್ಲ. ಈ ವಿಷಯವಾಗಿ ಈಗಾಗಲೇ ವಿಚಾರಣೆ ಮುಂದುವರೆದಿದೆ. ನಿಜವಾಗಿಯೂ ಯಾರಾದರೂ ತಪ್ಪಿಸಿಕೊಂಡು ಹೋಗಿದ್ದರೆ ಮರಳಿ ಕ್ವಾರಂಟೈನ್ ಗೆ ದಾಖಲಿಸಿ ಅವರ ಮೇಲೆ ಪ್ರಕರಣವನ್ನು ದಾಖಲಿಸಲಾಗುವದು ಎಂದು ಪೊಲೀಸರು ತಿಳಿಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ