213ನೇ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ

ಸೋಮವಾರ, 30 ಜನವರಿ 2023 (19:11 IST)
ಐತಿಹಾಸಿಕ ಲಾಲ್ ಬಾಗ್ ನ 213 ನೇ ಫಲಪುಷ್ಟ ಪ್ರದರ್ಶನಕ್ಕೆ ವಿದ್ಯುಕ್ತ ತರೆ ಬಿದ್ದಿದೆ. ಸಾರ್ವಜನಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಫ್ಲವರ್ ಶೋ ಇತಿಹಾಸದಲ್ಲೇ ಅತೀ ಹೆಚ್ಚು ಜನ ಪ್ರವಾಸಿಗರು ವೀಕ್ಷಣೆ ಮಾಡಿದ್ದು ದಾಖಲೆಯ ಹಣ ಸಂಗ್ರಹವಾಗಿದೆ. 11 ದಿನಗಳಲ್ಲಿ 8 ಲಕ್ಷ ಜನ ಭಾಗಿಯಾಗಿದ್ದು ಈ ವರ್ಷದ ವಿಶೇಷತೆಯಾಗಿದೆ
 
ಲಾಲ್ ಬಾಗ್  ನಲ್ಲಿ  ಗಣರಾಜ್ಯೋತ್ಸವದ ಅಂಗವಾಗಿ ನಡೆಯುತ್ತಿರೋ ಫಲಪುಷ್ಪ ಪ್ರದರ್ಶನಕ್ಕೆ ಈ ವರ್ಷ ಜೀವಕಳೆ ಬಂದಿತ್ತು. ಈ ವರ್ಷ ಸಸ್ಯಕಾಶಿಯಲ್ಲಿ  ಬೆಂಗಳೂರಿನ  ಇತಿಹಾಸದ ಕುರಿತು ಫ್ಲವರ್ ಶೋ ನಡೆಸಲಅತಿತು  . ಈ ವರ್ಷದ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದುಬಂದು ಬೆಂಗಳೂರಿನ  ಇತಿಹಾಸದ ಗತವೈಭವವನ್ನು ಕಣ್ತುಂಬಿಕೊಂಡಿದ್ದಾರೆ.
 
ಲಾಲ್ ಭಾಗ್ ಫ್ಲವರ್ ಶೋನ 213 ವರ್ಷಗಳ ಇತಿಹಾಸದಲ್ಲಿ ಅತೀ ಹೆಚ್ಚು ಜನ ಈ ವರ್ಷ ಭಾಗಿಯಾಗಿದ್ದಾರೆ ಹಾಗೂ ದಾಖಲೆಯ ಟಿಕೆಟ್ ಹಣ ಸಂಗ್ರಹವಾಗಿದೆ. 11 ದಿನ ನಡೆದ ವೈಭವದ ಉತ್ಸವದಲ್ಲಿ 8,34,552 ಪ್ರವಾಸಿಗರಿಂದ ಭಾಗಿಯಾಗಿದ್ದಾರೆ 2.50 ಕೋಟಿ ರೂ ಟಿಕೆಟ್ ಹಣ ಸಂಗ್ರಹವಾಗಿದೆ.  ಸಂತಸದಿಂದ ಪ್ರವಾಸಿಗರು ಫ್ಲವರ್ ಶೋಗೆ ವೀಕ್ಷಣೆ ಮಾಡಿದ್ದು, ಇದು ದಿನದ ಗಳಿಕೆಯಲ್ಲಿ ಈವರೆಗಿನ ದಾಖಲೆಯಾಗಿದೆ.
 
 ಇನ್ನು ಗಾಜಿನಮನೆಯಲ್ಲಿ ಸಿಂಗಾರಗೊಂಡ ಬೆಂಗಳೂರಿನ  ಇತಿಹಾಸದ ಫ್ಲವರ್ ಶೋಗೆ ಖರ್ಚಾಗಿದ್ದು ಅಂದಾಜು 2 ಕೋಟಿ, ಆದಾಯ ಬಂದಿರೋದು 2.50 ಕೋಟಿ. ಈ ಫ್ಲವರ್ ಶೋನಿಂದ ಕೋಟಿಗೂ ಹೆಚ್ಚು ಲಾಭ ಬಂದಿದೆ, ಬಂದ ಲಾಭವನ್ನು  ತೋಟಗಾರಿಕೆ ಇಲಾಖೆ ನಗರದ ಉದ್ಯಾನವನಗಳ ನಿರ್ವಹಣೆಗೆ ಹಾಗೂ ಅಭಿವೃದ್ದಿಗೆ ಬಳಸಿಕಳ್ಳಲಿದೆ. ದಿನಗಳ ಅದ್ದೂರಿ ಫ್ಲವರ್ ಶೋಗೆ ಲಾಲ್ ಬಾಗ್ ತೋಟಗಾರಿಕಾ ಇಲಾಖೆ ಯಾವುದೇ ಸಮಸ್ಯೆ ಇಲ್ಲದೆ ಅಚ್ಚುಕಟ್ಟಾಗಿ ಮುಗಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ