ದೇಶದಲ್ಲಿ ಒಂದೇ ದಿನ 2487 ಕೊರೊನಾ ಕೇಸ್ ಪತ್ತೆ

ಭಾನುವಾರ, 3 ಮೇ 2020 (19:51 IST)
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 40 ಸಾವಿರದ ಗಡಿ ದಾಟಿದೆ.

ಕಳೆದ 24 ಗಂಟೆಗಳಲ್ಲಿ 2487 ಕೊರೊನಾ ವೈರಸ್ ಪಾಸಿಟಿವ್ ಕೇಸ್ ಗಳು ದೃಢಪಟ್ಟಿವೆ. ಈ ಮೂಲಕ ಕೋವಿಡ್ – 19 ಕೇಸ್ ಗಳ ಸಂಖ್ಯೆ 40,263 ಕ್ಕೆ ಏರಿಕೆಯಾಗಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ 83 ಜನರು ಕೊರೊನಾದಿಂದ ಸಾವನ್ನಪ್ಪಿದ್ದು, ಇದುವರೆಗೂ ಡೆಡ್ಲಿ ಕೊರೊನಾದಿಂದ 1306 ಜನರು ಜೀವ ಬಿಟ್ಟಿದ್ದಾರೆ.  

28,070 ಆ್ಯಕ್ಟಿವ್ ಕೇಸ್ ಗಳಿದ್ದರೆ, 10887 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ