25 ಪೊಲೀಸರ ಕೊರೊನಾ ಟೆಸ್ಟ್ ವರದಿಯಲ್ಲಿ ಏನಿದೆ?

ಗುರುವಾರ, 16 ಏಪ್ರಿಲ್ 2020 (14:58 IST)
ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‌ಆರ್‌ಪಿ) ಯ 25 ಕಾನ್ಸಟೇಬಲ್ ಗಳ ಕೊರೊನಾ ವೈರಸ್ ಪರೀಕ್ಷಾ ವರದಿ ಬಂದಿದೆ.

ಬಳ್ಳಾರಿಯಿಂದ ಹಾವೇರಿ ಜಿಲ್ಲೆಗೆ ಕೋವಿಡ್‌–19 ಕರ್ತವ್ಯದ ಮೇಲೆ ಬಂದಿದ್ದ ಕರ್ನಾಟಕ ರಾಜ್ಯ ಮೀಸಲು ಪಡೆ (ಕೆಎಸ್‌ಆರ್‌ಪಿ) ಕಾನ್‌ಸ್ಟೆಬಲ್‌ವೊಬ್ಬರಿಗೆ ಕೊರೊನಾ ಸೋಂಕು ಶಂಕಿತ ಲಕ್ಷಣಗಳು ಕಂಡು ಬಂದಿತ್ತು.

ಈ ಹಿನ್ನಲೆ ಕಾನ್‌ಸ್ಟೆಬಲ್‌ ಸೇರಿದಂತೆ ಅವರ ಜೊತೆಯಲ್ಲಿ ಕರ್ತವ್ಯ ನಿರ್ವಹಿಸಿದ ಒಟ್ಟು 25 ಜನರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅದರ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ.  ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೋನಾ- 19 ಪ್ರಕರಣಗಳು ದೃಢಪಟ್ಟಿಲ್ಲವೆಂದು ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

7 ವರದಿ ನೆಗೆಟಿವ್ : ಅನೇಕ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ್ ಗ್ರಾಮದ ಮಹಿಳೆ ಮನೆ 7 ಜನರ ಗಂಟಲು ದ್ರವ್ಯದ ಮಾದರಿಯ ವರದಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವುಗಳ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಅಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣಭಾಜಪೇಯಿ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ