ಮುಂಬೈ ಮಾರಿಗೆ ಒಂದೇ ದಿನ 28 ಕೇಸ್ : ಬೆಚ್ಚಿದ ಕಲಬುರಗಿ
ಮುಂಬೈ ಮಾರಿ ಕೊರೊನಾ ವೈರಸ್ ಗೆ ಕಲಬುರಗಿಯಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ.
ಹೊಸದಾಗಿ ಕೊರೊನಾ ವೈರಸ್ ಕಂಡು ಬರುತ್ತಿರುವುದು ಮಹಾರಾಷ್ಟ್ರದಿಂದ ಬಂದವರಲ್ಲೇ ಹೆಚ್ಚುತ್ತಿದೆ.
ಈ ನಡುವೆ, ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು 80 ವರ್ಷದ ಹಿರಿಯ ಜೀವಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದರಿಂದ ಕೊರೋನಾ ಪೀಡಿತ 185 ಜನರಲ್ಲಿ 75 ಜನ ಗುಣಮುಖರಾಗಿದ್ದಾರೆ. 7 ಜನ ನಿಧನ ಹೊಂದಿದ್ದು, 103 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದ್ದಾರೆ.