ತೆಲಂಗಾಣದಲ್ಲಿ 2ನೇ ದಿನದ ಭಾರತ್​​ ಜೋಡೋ

ಗುರುವಾರ, 27 ಅಕ್ಟೋಬರ್ 2022 (16:40 IST)
ರಾಹುಲ್​​ ಗಾಂಧಿ ನೇತೃತ್ವದ ಭಾರತ್​​ ಜೋಡೋ ಯಾತ್ರೆ ನಾಲ್ಕು ದಿನಗಳ ಬಿಡುವಿನ ನಂತರ ಇಂದು ತೆಲಂಗಾಣದ ನಾರಾಯಣ್​ ಪೇಟೆ ಜಿಲ್ಲೆಯ ಮುಕ್ತಾಲ್​​​ನಿಂದ ಮತ್ತೆ ಪ್ರಾರಂಭಗೊಂಡಿದೆ. ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ರೇವತ್​​ ರೆಡ್ಡಿ, ಸಂಸದ ಉತ್ತಮ್​​ ಕುಮಾರ್​ ರೆಡ್ಡಿ, CLP ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಪಕ್ಷದ ಹಲವಾರು ಮುಖಂಡರು ರಾಹುಲ್ ಗಾಂಧಿ​​ ಅವರೊಂದಿಗೆ ಬೆಳಗ್ಗೆ 6.30ಕ್ಕೆ ಮುಕ್ತಾಲ್​​ನಿಂದ ಯಾತ್ರೆ ಆರಂಭಿಸಿದರು. ತೆಲಂಗಾಣದಲ್ಲಿ ಇದು ಯಾತ್ರೆಯ ಎರಡನೇ ದಿನ. ಯಾತ್ರೆ ಅಕ್ಟೋಬರ್​​ 23ರಂದು ಬೆಳಗ್ಗೆ ಕರ್ನಾಟಕದ ರಾಯಚೂರಿನಿಂದ ನಿರ್ಗಮಿಸಿ, ಗುಳ್ಳೆಬೆಳ್ಳೂರು ಮೂಲಕ ತೆಲಂಗಾಣವನ್ನು ಪ್ರವೇಶಿಸಿತು. ಇಂದು 26.7 ಕಿಲೋಮೀಟರ್​​​ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ