ಒಂದೇ ದಿನಕ್ಕೆ 3 ಕೋಟಿ ಕ್ರಾಸ್ …

ಶನಿವಾರ, 4 ಫೆಬ್ರವರಿ 2023 (14:30 IST)
ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಜೋರಾಗಿ ನಡೆದಿದ್ದು,ಸರ್ಕಾರ ಹೊರಡಿಸಿರೋ 50 ಪರ್ಸೆಂಟ್ ಡಿಸ್ಕೌಂಟ್ ಫೈನ್ ಫುಲ್ ಕ್ಲಿಕ್ ಆಗಿದೆ. ದಂಡ ವಸೂಲಿಯಲ್ಲಿ ಕಲೆಕ್ಟ್ ಆದ ದಂಡದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರ. ಆ್ಯಪ್ ನಿಂದ ವೆಬ್ ಸೈಟ್ ನಿಂದ ಹಣ ಕಲೆಕ್ಟ್ ಆಗ್ತಿದೆ.ಪಿಡಿಎ ಯಲ್ಲಿ 61,174 ಕೇಸುಗಳಲ್ಲಿ 1,48,65,100 ಕೋಟಿ ರೂ ವಸೂಲಿಯಾಗಿದೆ.ಪೇಟಿಎಂ ಆ್ಯಪ್ ನಿಂದ 75,185 ಕೇಸುಗಳಲ್ಲಿ 2,30,77,900 ಕೋಟಿ ರೂ ವಸೂಲಿಯಾಗಿದೆ.ಟಿಎಂಸಿ ಕೇಂದ್ರದಲ್ಲಿ 337 ಕೇಸ್ ಗಳಲ್ಲಿ 89,650 ರೂ ವಸೂಲಿಯಾಗಿದೆ.
 
ಬೆಂಗಳೂರು ಒನ್ ನಲ್ಲಿ 6,161 ಕೇಸ್ ಗಳಲ್ಲಿ 16,21,600 ರೂ ವಸೂಲಿಯಾಗಿದೆ.ಒಟ್ಟು 1,42,859 ಕೇಸುಗಳಲ್ಲಿ 3,96,54,250 ಕೋಟಿ ರೂ ದಂಡ ವಸೂಲಿಯಾಗಿದೆ
 
ಡಿಸ್ಕೌಂಟಿಗೆ ಫಿದಾ ಆಗಿರೋ ವಾಹನ ಸವಾರರು ಇದೀಗ ಹಾಫ್ ಫೈನ್ ಕಟ್ಟೋಕೆ ತಾ ಮುಂದು ನಾ ಮುಂದು ಅಂತ ಬರ್ತಿದ್ದಾರೆ.ಒಟ್ಟಿನಲ್ಲಿ ದಂಡದ ಮೊತ್ತ ಒಂದೇ ದಿನ  3 ಕೋಟಿ ಕ್ರಾಸ್ ಮಾಡಿದೆ.  ಫೆ.11 ರವರೆಗೂ ಇದೇ ರೇಷಿಯೋ ಮುಂದುವರಿದ್ರೆ ಮೂವತ್ತು ಕೋಟಿ ದಂಡ ವಸೂಲಿಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ