ಮೂರು ತಿಂಗಳ ಹಿಂದೆಯೇ ಉದ್ಘಾಟನೆಯಾದ ಅಂಡರ್ ಪಾಸ್ ಕುಸಿತ

ಸೋಮವಾರ, 10 ಅಕ್ಟೋಬರ್ 2022 (17:27 IST)
ಬೆಂಗಳೂರಿನ ಕುಂದಲಹಳ್ಳಿಯ  ಬಳಿ ಮೂರು ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್​ಪಾಸ್  ನಿರ್ಮಾಣಗೊಂಡಿದೆ. ಆದ್ರೆ ಈ ಅಂಡರ್​​ಪಾಸ್ ಕೇವಲ ಮೂರು ತಿಂಗಳಲ್ಲಿ ಕುಸಿದಿದ್ದು, ಸಾರ್ವಜನಿಕರು  ಆಕ್ರೋಶ ಹೊರಹಾಕಿದ್ದಾರೆ.
 
ಹೂಡಿ ಮುಖ್ಯ ರಸ್ತೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕುಂದನಹಳ್ಳಿಯಲ್ಲಿ ಅಂಡರ್​ಪಾಸ್ ಕುಸಿದಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪೈಪ್‌ಲೈನ್ ಸೋರಿಕೆಯಾಗಿದ್ದರಿಂದಲೇ ಅಂಡರ್​ಪಾಸ್ ಕುಸಿತ ಕಂಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
 
2019ರಲ್ಲಿ ಅಂಡರ್​ಪಾಸ್​ ಕಾಮಗಾರಿ ಶುರುವಾಗಿತ್ತು. ಮೂರು ತಿಂಗಳ ಹಿಂದೆಯಷ್ಟೇ ಈ ಅಂಡರ್​ಪಾಸ್ ಉದ್ಘಾಟನೆ ಆಗಿತ್ತು. ಆದ್ರೆ ಈಗ ಮಳೆಯಿಂದಾಗಿ ಅಂಡರ್​ಪಾಸ್​​ ಹಂತ ಹಂತವಾಗಿ ಕುಸಿಯಲು ಆರಂಭಿಸಿದೆ.
 
ಇನ್ನು ಪೈಪ್​ಲೈನ್ ಸೋರಿಕೆಗೊಂಡ ಕಾರಣ ಈ ಭಾಗದಲ್ಲಿ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಕುಸಿದ ರಸ್ತೆಗೆ ಜಲ್ಲಿ ಕಲ್ಲು ಹಾಕಲಾಗಿದೆ. ಸದ್ಯ ರಸ್ತೆ ಸರಿಪಡಿಸಲು ಕೆಲವು ದಿನಗಳು ಬೇಕಾಗಬಹುದು. ವಾರ್ಷಿಕ ನಿರ್ವಹಣೆ ಮತ್ತು ನ್ಯೂನತೆ ಹೊಣೆಗಾರಿಕೆ ಷರತ್ತುಗಳು ಅನ್ವಯ ಆಗುವ ಕಾರಣ ಗುತ್ತಿಗೆದಾರರು ಮತ್ತೆ ಹೊಸ ಬಿಲ್ ಸಲ್ಲಿಕೆ ಮಾಡಲು ಬರಲ್ಲ. ಹಾಗಾಗಿ ಕಾಮಗಾರಿ ನಡೆಸಿದ ಗುತ್ತಿಗೆದಾರರು ರಸ್ತೆ ಸರಿಪಡಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ